ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗಾಲ್ಫ್ ಪಂದ್ಯಾವಳಿ ಮುಕ್ತಾಯ

Vishwanath S
Updated On : 2 Jul 2013, 12:55 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 1
ಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‌ನಲ್ಲಿ ಆಂದೋಲನ ಪ್ರಾಯೋಜಿತ ಏರ್ಪಡಿಸಿದ್ದ ಗಾಲ್ಫ್ ಪಂದ್ಯಾವಳಿ ಮುಕ್ತಾಯಗೊಂಡಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ 170 ಮಂದಿ ಸ್ಪರ್ಧಿಗಳಲ್ಲಿ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಎಂ.ಎಸ್. ಯಶಸ್‌ಚಂದ್ರ ಪ್ರಥಮ, ವಿಂಗ್ ಕಮಾಂಡರ್ ಕೆ.ಎಚ್.ಬಿ. ಸಿಂಗ್ ದ್ವಿತೀಯ, ಸ್ಟ್ರೋಕ್ ಪ್ಲೇ ನೆಟ್ ವಿಭಾಗದಲ್ಲಿ ಕರುಂಬಯ್ಯ ಪ್ರಥಮ, ಎಂ.ಜಿ. ಚೆಂಗಪ್ಪ ದ್ವಿತೀಯ ಸ್ಥಾನ ಗಳಿಸಿದರು.
ಸ್ಟೇಬಲ್ ಫೋರ್ಡ್ ನೆಟ್ ವಿಭಾಗದಲ್ಲಿ ಎಂ. ಅನಂತ ಪ್ರಥಮ, ಕನಎಲ್ ಸಿ.ಪಿ. ಮೇದಪ್ಪ ದ್ವಿತೀಯ, 65 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಡಾ.ಜೆ.ಕೆ. ಸುಂದರ್‌ರಾಜ್ ಪ್ರಥಮ, ವಿಂಗ್ ಕಮಾಂಡರ್ ಅನಂತರಾಮನ್ ದ್ವಿತೀಯ ಬಹುಮಾನ ಪಡೆದುಕೊಂಡರು. ಭಾನುವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ಕೆ.ಎ. ಮುದ್ದಪ್ಪ, ಪತ್ರಕರ್ತ ರವಿ ಕೋಟಿ, ರಶ್ಮಿ ಕೌಜಲಗಿ ಪ್ರಶಸ್ತಿ ವಿತರಿಸಿದರು.
ಗಾಲ್ಫ್ ಕ್ಲಬ್ ಅಧ್ಯಕ್ಷ ಡಾ.ಪಿ.ಎ. ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ನಾಗೇಶ್, ಡಾ.ಬಿ.ಜಿ. ಯೋಗೇಶ್, ಡಾ. ವೆಂಕಟೇಶ್ ಜೋಶಿ, ಪಿ.ಎಂ. ಗಣಪತಿ, ಪತ್ರಿಕೋದ್ಯಮಿ ರಾಜಶೇಖರ ಕೋಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement