ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಮ್ಮು- ಕಾಶ್ಮೀರ ದೇಶದ ಅವಿಭಾಜ್ಯ ಅಂಗ: ಅರುಣ್

Vishwanath S
Updated On : 2 Jul 2013, 12:55 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 1
ಜಮ್ಮು- ಕಾಶ್ಮೀರ ಭಾರತದ ಅಂಗವಾಗಿದ್ದು, ನಮ್ಮ ಮಡಿಲಿನ ಪ್ರದೇಶ ಎಂಬಂತೆ ನಾವು ಕಾಣಬೇಕು ಎಂದು ಜಮ್ಮು- ಕಾಶ್ಮೀರ ಅಧ್ಯಯನ ಕೇಂದ್ರದ ನಿರ್ದೇಶಕ ಅರುಣ್‌ಕುಮಾರ್ ಹೇಳಿದರು.
ನಗರದ ಜೆಎಲ್‌ಬಿ ರಸ್ತೆ ಮಾಧವ ಕೃಪಾದಲ್ಲಿ ಮಂಥನ (ಚಿಂತಕರ- ಲೇಖಕರ ವೇದಿಕೆ) ಆಯೋಜಿಸಿದ್ದ ಜಮ್ಮು- ಕಾಶ್ಮೀರ ವಸ್ತುಸ್ಥಿತಿ-ಸವಾಲು- ಪರಿಹಾರದ ಹೆಜ್ಜೆಗಳು ಕುರಿತು ಮಾತನಾಡಿ, ಕಾಶ್ಮೀರದ ವಿಚಾರದಲ್ಲಿ ಬರೀ ಬಾಯಿ ಮಾತು ಹೋರಾಟ ಸಾಲದು. ವಾಸ್ತವ ಸ್ಥಿತಿಗತಿ ಮೇಲೆ ಹೋರಾಟ ನಡೆಸಿ ಜಮ್ಮು- ಕಾಶ್ಮೀರವನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಮ್ಮು ಕಾಶ್ಮೀರ ಸಮಸ್ಯೆಯನ್ನು ಅಳವಾಗಿ ಅಧ್ಯಯನ ನಡೆಸಿದ ಬಳಿಕ ನಮಗೆ ಅನೇಕ ಮಾಹಿತಿ ಸಂಗ್ರಹವಾಯಿತು. ಅದನ್ನು ಅವಲೋಕಿಸಿದರೆ ಕಾಶ್ಮೀರದಲ್ಲಿ ಆತಂಕದ ಸಮಸ್ಯೆ ಇರುವುದು ಗೊತ್ತಾಯಿತು. ಕಾಶ್ಮೀರದಲ್ಲಿ ಆತಂಕವಾದದ ಸಮಸ್ಯೆ ಇರಲಿ, ಬಿಹಾರದಲ್ಲಿ ಬಡತನ ನಿರ್ಮೂಲನೆ ಸಮಸ್ಯೆ ಇರಲಿ, ಛತ್ತೀಸ್‌ಘಡ ರಾಜ್ಯದಲ್ಲಿ ನಕ್ಸಲಿಸಂ ಸಮಸ್ಯೆಯಾಗಿರಲಿ ಅದು ಆಯಾ ರಾಜ್ಯದ ಸಮಸ್ಯೆ ಅಂಥ ನೋಡಬಾರದು. ರಾಷ್ಟ್ರದ ಏಕತೆಗೆ ಸಂಬಂಧಿಸಿದ್ದು ಎಂದು ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಜಮ್ಮು- ಕಾಶ್ಮೀರ ಅಧ್ಯಯನ ಕೇಂದ್ರದ ಬೆಂಗಳೂರು ವಿಭಾಗದ ನಿರ್ದೇಶಕ ರಾಧಾಕೃಷ್ಣ ಹೊಳ್ಳ ದಿಕ್ಸೂಚಿ ಭಾಷಣ ಮಾಡಿ, ಕಾಶ್ಮೀರ ಹೋರಾಟದ ವಿಚಾರದಲ್ಲಿ ಸಂಘರ್ಷದ ಹೋರಾಟವಲ್ಲ. ಭಾವನಾತ್ಮಕ ವಿಚಾರ ಅಡಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement