ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾ.ಹೆ. ವಿಸ್ತರಣೆಗೆ ಆಕ್ಷೇಪಣೆ ಸಲ್ಲಿಕೆ

Vishwanath S
Updated On : 2 Jul 2013, 12:55 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 1
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 212ರ ಕೊಳ್ಳೇಗಾಲದಿಂದ ಗುಂಡ್ಲುಪೇಟೆವರೆಗಿನ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಭಾನುವಾರ ನಗರದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಭೂ ಪರಿಹಾರಧನ ನಿರ್ಧರಿಸುವ ಜನಸಂಪರ್ಕ ಸಭೆಯಲ್ಲಿ ರೈತರು ಆಕ್ಷೇಪಣೆ ಸಲ್ಲಿಸಿದರು.
ಕೊಳ್ಳೇಗಾಲದ ಉತ್ತಂಬಳ್ಳಿ- ಟಿ. ನರಸೀಪುರ- ವರುಣ- ಬಂಡೀಪಾಳ್ಯ- ಗುಂಡ್ಲುಪೇಟೆ ತನಕ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಣೆ ಮಾಡಲಿದ್ದು, ರಸ್ತೆಗೆ ಒಳಪಡುವ ರೈತರ ಜಮೀನುಗಳಿಗೆ ಪರಿಹಾರ ಧನ ನೀಡಬೇಕು. ಪ್ರತಿ ಚದರ ಅಡಿಗೆ 3 ರಿಂದ 6 ಸಾವಿರವರೆಗೆ ಪರಿಹಾರ ನೀಡುವಂತೆ ರೈತರ ಪರ ವಕಾಲತ್ತು ವಹಿಸಿರುವ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ, ವಕೀಲ ಬಡಗಲಪುರ ನಾಗೇಂದ್ರ ಅಧಿಕಾರಿಗಳನ್ನು ಆಗ್ರಹಿಸಿದರು.
ಮಾಹಿತಿ ಇಲ್ಲ: ಆಕ್ಷೇಪಣೆ ಸಲ್ಲಿಸಲು ಕರೆದಿದ್ದ ಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಬಾರಿ ತಿಳಿಸಿದಂತೆ ಸಭೆಯು ಮಧ್ಯಾಹ್ನ 2.30ಕ್ಕೆ ಆರಂಭವಾಗಬೇಕಿತ್ತು. ಆದರೆ, ಮುಂಚಿತವಾಗಿ ಅಂದರೆ ಬೆಳಗ್ಗೆ 11.30ಕ್ಕೆ ಸಭೆ ಕರೆದಿರುವುದು ಸರಿಯಲ್ಲ. ಆಕ್ಷೇಪಣೆ ಸಲ್ಲಿಸಲು ಬಂದ ರೈತರಿಗೆ ಕೂರಲು ಆಸನ ವ್ಯವಸ್ಥೆ ಮಾಡಿರಲಿಲ್ಲ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement