ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈತ ಸಂಪರ್ಕ ಕೇಂದ್ರದಲ್ಲಿ ಔಷಧಿಗಾಗಿ ಪರದಾಟ

Vishwanath S
Updated On : 2 Jul 2013, 12:55 pm

ಗುಂಡ್ಲುಪೇಟೆ: ತಾಲೂಕಿನ ಬೇಗೂರು ರೈತ ಸಂಪರ್ಕ ಕೇಂದ್ರದಲ್ಲಿ ಔಷಧಿಗಳು ಸಿಗದೆ ರೈತರು ಪರದಾಡುತ್ತಿದ್ದಾರೆ.
ರೈತರ ಫಸಲಿಗೆ ಅಗತ್ಯವಾಗಿ ಬೇಕಾದ ಔಷಧಿಗಳನ್ನು ಸಂಗ್ರಹಿಸಿಡಲು ಬೇಗೂರಿನ ಕೃಷಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಬೇಗೂರು ಭಾಗದಲ್ಲಿ ಹತ್ತಿಯನ್ನು ಹೆಚ್ಚಾಗಿ ಬೆಳೆಯುವುದರಿಂದ ಹತ್ತಿ ಬೆಳೆಗೆ ಬೇಕಾದ ಔಷಧಿಗಳನ್ನು ಕೃಷಿ ಇಲಾಖೆ ಪೂರೈಕೆ ಮಾಡಬೇಕಿದ್ದು, ಅಧಿಕಾರಿಗಳು ಔಷಧ ದಾಸ್ತಾನು ಮಾಡಿಲ್ಲ. ಬೇವಿನ ಎಣ್ಣೆ ಮಾತ್ರ ಸದ್ಯಕ್ಕೆ ಸ್ಟಾಕ್ ಇದ್ದು, ಅದು ಮುಗಿಯುವ ಹಂತದಲ್ಲಿದೆ. ಕ್ಲೋರೋಫಾರಿಪಾಸ್ ಹಾಗೂ ರೋಗರ್ ಬೇಕಿದ್ದು, ಇದೀಗ ರೈತರು ಖಾಸಗಿ ಅಂಗಡಿಯತ್ತ ಮುಖ ಮಾಡುವಂತಾಗಿದೆ.
ಬೇಗೂರು ರೈತ ಸಂಪರ್ಕ ಕೇಂದ್ರದಲ್ಲಿ ಔಷಧಿಗಳು ಮುಗಿದಿದೆ. ಸದ್ಯ ಬೇವಿನ ಎಣ್ಣೆ ಸ್ಟಾಕ್ ಇದೆ. ಔಷಧಿ ಬೇಕೆಂದು ಕೃಷಿ ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದೇವೆ.
- ಸೋಮಶೇಖರ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ.

ರೈತ ಪರ ಸರ್ಕಾರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಅವಧಿಯಲ್ಲೂ ರೈತರಿಗೆ ಅಗತ್ಯವಾದ ಔಷಧಿ ಸಿಕ್ಕದಿರುವುದರಿಂದ ರೈತರು ಖಾಸಗಿ ಅಂಗಡಿಗಳತ್ತ ಮುಖ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಂತ್ರಿಗಳು ಇತ್ತ ಗಮನ ಹರಿಸಲಿ.
- ನಾಗೇಂದ್ರಪ್ರಸಾದ್, ರೈತ ಮುಖಂಡ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement