ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಿಂಗಳೊಳಗೆ ಮಾಸಾಶನ ವಿತರಿಸಿ

Vishwanath S
Updated On : 3 Jul 2013, 12:21 pm

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಜು. 2
ಇನ್ನೊಂದು ತಿಂಗಳೊಳಗೆ ತಾಲೂಕಿನಾದ್ಯಂತ ಅಂಗವಿಕಲ, ವಿಧವಾ ವೇತನ ಮತ್ತು ವೃದ್ಧಾಪ್ಯ ವೇತನದ ಫಲಾನುಭವಿಗಳ ಪಟ್ಟಿ ತಯಾರಿಸಿ, ಅವರ ಮನೆ ಬಾಗಿಲಿಗೆ ಹೋಗಿ ಅರ್ಹರಿಗೆ ಆದೇಶ ಪತ್ರಗಳನ್ನು ವಿತರಿಸಬೇಕು ಎಂದು ಶಾಸಕ ಸಾ.ರಾ. ಮಹೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ದೊಡ್ಡಹನಸೋಗೆ ಗ್ರಾಮದಲ್ಲಿ ಮಂಗಳವಾರ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಅವರು, ಸರ್ಕಾರದ ಸವಲತ್ತುಗಳನ್ನು ಪಡೆಯ ಬಯಸುವವರು ತಾವೆ ಅರ್ಹತೆಯನ್ನು ಮಾನದಂಡವನ್ನಾಗಿಸಿಕೊಂಡು ಅರ್ಜಿ ಸಲ್ಲಿಸಿ ಉಳ್ಳವರಿಗೆ ಸವಲತ್ತು ದೊರಕದಂತೆ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದರು.
ನನ್ನ ಶಾಸಕತ್ವದ ಅವಧಿಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿ ಮತ್ತು ಆಮೂಲಾಗ್ರ ಬದಲಾವಣೆಗೆ ದುಡಿಯುತ್ತೇನೆ.
ಜನಸೇವೆ ಮಾಡಿದರೆ ಮತದಾರರು ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ನಾನು ಪುನರಾಯ್ಕೆಯಾಗಿರುವುದೆ ಸಾಕ್ಷಿ. ಜನರ ಮನೆ ಬಾಗಿಲಿಗೆ ಸವಲತ್ತು ತಲುಪಿಸುವುದೆ ಪ್ರಮುಖ ಗುರಿಯಾಗಿದ್ದು, ಇದಕ್ಕೆ ಎಲ್ಲರೂ ಸಹಕರಿಸಿ ಎಂದು ಅವರು ಹೇಳಿದರು.
ಎಚ್.ಡಿ. ಕೋಟೆ ಶಾಸಕ ಎಸ್. ಚಿಕ್ಕಮಾದು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ದುಡಿಯುವ ಸಾ.ರಾ. ಮಹೇಶ್ ಇತರ ಶಾಸಕರಿಗೆ ಮಾದರಿಯಾಗಿದ್ದು, ಕಳೆದ ಐದು ವರ್ಷಗಳ ಅವಧಿಯಲ್ಲಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸಿದ್ದಾರೆ. ಮತದಾರರು ಮತ್ತೆ ಪುನರಾಯ್ಕೆ ಮಾಡಿ ಇವರ ಸೇವೆಗೆ ಮನ್ನಣೆ ನೀಡಿದ್ದಾರೆಂದು ಪ್ರಶಂಸಿಸಿದರು.
ಶಾಸಕರು ಕರ್ತಾಳು, ಅಬ್ಬೂರು, ತಂದ್ರೆ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಅಹವಾಲು ಆಲಿಸಿದರು.
ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ  ಸಿ.ಜೆ. ದ್ವಾರಕೀಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಟಿ.ಕೀರ್ತಿ, ಹೊಸೂರು ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಆರ್.ಮಧುಚಂದ್ರ, ದಲಿತ ಮುಖಂಡ ಹನಸೋಗೆ ನಾಗರಾಜು, ತಾಲೂಕು ಯುವ ಜೆಡಿಎಸ್ ಉಪಾಧ್ಯಕ್ಷ ಹಳಿಯೂರು ಕೃಷ್ಣಮೂರ್ತಿ, ಜೆಡಿಎಸ್ ಮುಖಂಡರಾದ ಕೋಳೂರು ರಮೇಶ್, ಹೆಚ್.ಟಿ.ರಾಜೇಶ್, ತಂದ್ರೆ ಪುಟ್ಟಸ್ವಾಮಿ, ಉಪತಹಸೀಲ್ದಾರ್ ತಿಮ್ಮಯ್ಯ ಇದ್ದರು.

ಮಾಸಾಶನಕ್ಕೆ ಅಂಗವಿಕಲನ ನಿತ್ಯ ಅಲೆದಾಟ
ಕೆ.ಆರ್. ನಗರ:
ಒಂದು ವರ್ಷದಿಂದ ರಾಮಲಿಂಗೇಶ್ವರ ಎಂಬವರಿಗೆ ಅಂಗವಿಕಲ ವೇತನ ರದ್ದಾಗಿದ್ದು, ನಿತ್ಯ ಕಚೇರಿಗೆ ಅಲೆದರೂ ಇವನ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ತಾಲೂಕಿನ ಹಾಡ್ಯಗೊಲ್ಲರಕೊಪ್ಪಲು ಗ್ರಾಮದ ರಾಮಲಿಂಗೇಶ್ವರನಿಗೆ ಒಂದು ಕಾಲು ಸಂಪೂರ್ಣ ಇಲ್ಲವಾಗಿದೆ. ಈತ ಸರ್ಕಾರದಿಂದ ಅಂಗವಿಕಲರ ಮಾಸಾಶನ ಒಂದು ಸಾವಿರ ರು. ಗಳನ್ನು ಐದು ವರ್ಷಗಳಿಂದ ಪಡೆಯುತ್ತಿದ್ದ. ಇದ್ದಕ್ಕಿದ್ದಂತೆ ವರ್ಷದ ಹಿಂದೆ ವೇತನ ಸ್ಥಗಿತಗೊಂಡಿತು. ಈ ಸಂಬಂಧ ಉಪಖಜಾನೆಗೆ ಹೋಗಿ ವಿಚಾರಿಸಿದಾಗ ತಾಲೂಕು ಕಚೇರಿಯಲ್ಲಿ ವೇತನ ಆದೇಶ ರದ್ದಾಗಿದೆ ಎಂದು ಹೇಳಿದರು. ಆನಂತರ ಆತ ಕಚೇರಿಗೆ ನಿತ್ಯ ಅಲೆದು ತನ್ನ ಸಂಕಷ್ಟ ಹೇಳಿಕೊಂಡರೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ರಾಮಲಿಂಗೇಶ್ವರನಿಗೆ ವೇತನ ಸ್ಥಗಿತಗೊಳ್ಳಲು ತಾಲೂಕು ಕಚೇರಿಯ ಸಿಬ್ಬಂದಿಯ ಅಸಡ್ಡೆ ಕಾರಣ ಎಂದು ಆರೋಪಿಸಿರುವ ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ತಹಸೀಲ್ದಾರರು ಕೂಡಲೆ ಅಗತ್ಯ ಕ್ರಮಕೈಗೊಂಡು ಈತನಿಗೆ ವೇತನ ಪುನರ್ ಮಂಜೂರು ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement