ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆಯಿಂದ ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ

Vishwanath S
Updated On : 7 Jul 2013, 12:17 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 6
ಖಾಸಗಿ ಬಸ್ ಪ್ರಯಾಣ ದರವನ್ನು ಜು. 8ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಬಸ್ ಮಾಲೀಕರ ಸಂಘ ತಿಳಿಸಿದೆ.
ಮೈಸೂರಿನಿಂದ ಟಿ. ನರಸೀಪುರಕ್ಕೆ 25, ಕೊಳ್ಳೇಗಾಲ 50, ಸಂತೇಮರಹಳ್ಳಿ 40, ಯಳಂದೂರು 45, ಚಾಮರಾಜನಗರ 50, ತಲಕಾಡು ಹೆಮ್ಮಿಗೆ ಮಾರ್ಗ 45, ತಲಕಾಡು ಪೂರಿಗಾಲಿ ಮಾರ್ಗ 50, ಮುಡುಕುತೊರೆ 48, ಸುತ್ತೂರು 22, ನಂಜನಗೂಡು 25, ಕೆಆರ್‌ಎಸ್ ಗಾರ್ಡನ್ 18 ಹಾಗೂ ಮಹದೇಶ್ವರಬೆಟ್ಟಕ್ಕೆ 120 ನಿಗದಿಪಡಿಸಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ಡೀಸೆಲ್ ಬೆಲೆ ಏರಿಸಿರುವುದರಿಂದ ಹಾಗೂ ವಾಹನದ ಬಿಡಿ ಭಾಗಗಳ ಬೆಲೆ ಹೆಚ್ಚಳವಾಗಿರುವುದರಿಂದ ಉದ್ಯಮದಲ್ಲಿ ನಷ್ಟ ಉಂಟಾಗುತ್ತಿರುವುದನ್ನು ಮನಗಂಡು, ಸಂಘದ ಅಧ್ಯಕ್ಷರಾದ ಟಿ. ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ದರ ಹೆಚ್ಚಳ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ತಾಯೂರು ವಿಠಲಮೂರ್ತಿ ತಿಳಿಸಿದ್ದಾರೆ.  
ನಿರ್ದೇಶಕರಾದ ಕೆ.ಆರ್. ಶಾಮಣ್ಣ, ಪಿ. ಪುಟ್ಟರಾಜು, ಮನೋಜ್‌ಕುಮಾರ್, ಕೆ. ಪುಟ್ಟೇಗೌಡ, ವೈ.ಎಂ. ಮಂಜುನಾಥ್, ವೈ. ಎನ್. ಕೃಷ್ಣರಾವ್, ಆರ್. ಬಾಲಸುಂದರಂ, ತಿಲಕ್‌ಕುಮಾರ್ ಮತ್ತು ಮಸೀದ್ ಅಹಮದ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement