ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪರಿಹಾರಕ್ಕಾಗಿ ದೇಣಿಗೆಗೆ ಮನವಿ

Vishwanath S
Updated On : 7 Jul 2013, 12:18 pm

ಮೈಸೂರು: ಉತ್ತರಾಖಂಡದಲ್ಲಿ ಪ್ರಕೃತಿ ವಿಕೋಪದಿಂದ ನೊಂದ ಜನತೆಗೆ ಪರಿಹಾರ ಕಲ್ಪಿಸುವ ಸಲುವಾಗಿ ಜಿಲ್ಲೆಯ ಎಲ್ಲ ಸಹಕಾರ ಸಂಸ್ಥೆಗಳು  ಉದಾರವಾಗಿ ದೇಣಿಗೆ ನೀಡುವುದರ ಮೂಲಕ ನೊಂದವರಿಗೆ ಸಹಕರಿಸಲು ಕೋರಿದೆ.ಸಹಕಾರ ಸಂಸ್ಥೆಗಳು ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡುವ ವಂತಿಗೆಗೆ ಶೇ.100 ಆದಾಯ ತೆರಿಗೆ ಕಾಯ್ದೆ ಪ್ರಕರಣ 80ಜಿ ಪ್ರಕಾರ ಸಂಪೂರ್ಣ ವಿನಾಯಿತಿ ಇರುತ್ತದೆ. ಸಹಕಾರ ಸಂಸ್ಥೆಗಳು ದೇಣಿಗೆ, ವಂತಿಗೆಯನ್ನು ನೀಡುವ ಸಂಬಂಧ ಡಿಡಿಯನ್ನು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ  (ಕ್ಠ್ಝಿಟಜ ಂ್ಝಟ್ಝಿಡಡಿಜ್ಠ ಃಛಡ್ಝ್ಟಿಟಿಛಟ ಖಜಟ್ಝಜಜಿ ಋ್ಡಟಿಜ) ಖಈಖ ಛಡಿ ಆಠಜ್ಢ ಛಿಛಟ್ಞಿಡನ ಹೆಸರಿನಲ್ಲಿ ಪಡೆದು ಅದನ್ನು ಮೈಸೂರು ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಸಲ್ಲಿಸಲು ಉಪ ನಿಬಂಧಕ ಎಚ್.ಸಿ. ಜೋಷಿ ತಿಳಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು: ಕೇಂದ್ರ ಸರ್ಕಾರವು ಕಲೆ, ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಮತ್ತು ಅಸಾಧಾರಣ ಸಾಧನೆ ಮಾಡಿರುವ 4 ರಿಂದ 15 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರಪ್ರಶಸ್ತಿ ನೀಡುವ ಯೋಜನೆ ಜಾರಿಗೆ ತಂದಿದೆ.1998ರ ಆಗಸ್ಟ್ ಒಂದರ ನಂತರ ಹುಟ್ಟಿದ ಮಕ್ಕಳನ್ನು  2013ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ರಾಷ್ಟ್ರಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ, 20 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ಹಾಗೂ 35 ಬೆಳ್ಳಿ ಪದಕ (ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ), 10 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ಒಳಗೊಂಡಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎನ್.ಆರ್. ವಿಜಯ್ ತಿಳಿಸಿದ್ದಾರೆ.ಅಸಾಧಾರಣ ಸಾಧನೆ ಮಾಡಿರುವ ಜಿಲ್ಲೆಯ ಮಕ್ಕಳು ಈ ರಾಷ್ಟ್ರ ಪ್ರಶಸ್ತಿಗಾಗಿ ನಿಗದಿತ ಅರ್ಜಿ ನಮೂನೆಗಳನ್ನು  ಪಡೆದು, ಇಂಗ್ಲಿಷ್‌ನಲ್ಲಿ  ಭರ್ತಿ ಮಾಡಿ ತ್ರಿಪ್ರತಿಯಲ್ಲಿ ಜು.15 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 2498031.

ಕ್ಯಾನ್ಸರ್ ಗೆದ್ದ ಬಾಲಕ
ಎಚ್.ಡಿ. ಕೋಟೆ: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕ ತಾಲೂಕಿನ ನಿಸರ್ಗ ಫೌಂಡೇಷನ್ ಸಂಸ್ಥೆಯ ಮಕ್ಕಳ ಸಹಾಯ ವಾಣಿ 1098 ತಂಡದ ಸಹಾಯದಿಂದ ಸಂಪೂರ್ಣ ಗುಣಮುಖನಾಗಿದ್ದಾನೆ.ತಾಲೂಕಿನ ಬೆಳಗನಹಳ್ಳಿ ಕಾವಲ್ ಗ್ರಾಮದ ಪೆರುಮಾಳ್ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರ ಮಣಿ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಗ್ಗೆ ತಿಳಿಸಿ, ಸಹಾಯಹಸ್ತ ಕೋರಿದರು. ನಂತರ ಸಹಾಯವಾಣಿ ತಂಡವು ಸೂಕ್ತ ಮಾರ್ಗದರ್ಶನ ನೀಡಿ, ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಈ ಮಗುವಿಗೆ ಆರೋಗ್ಯ ಸೌಲಭ್ಯ ಒದಗಿಸಿಕೊಡುವಂತೆ ಕೋರಿದರು. ಅಧಿಕಾರಿಗಳು ಸೂಕ್ತ ದಾಖಲಾತಿ ಒದಗಿಸಿ ಬೆಂಗಳೂರಿನ ಇಂದಿರಾ ಗಾಂಧಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಿ ಎರಡು ತಿಂಗಳು ಸೂಕ್ತ ಚಿಕಿತ್ಸೆ ನೀಡಲಾಯಿತು. ನಂತರ ಬಾಲಕ ಗುಣಮುಖವಾಗಿ ಆರೋಗ್ಯವಾಗಿದ್ದಾನೆ.

ವಿದ್ಯಾರ್ಥಿ ನಾಪತ್ತೆ
ಮೈಸೂರು: ಶಾರದಾ ವಿಲಾಸ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಹಾಗೂ ಶ್ರೀನಿವಾಸ್, ಭಾಗ್ಯ ಎಂಬವರ ಪುತ್ರ ಎಸ್. ರಕ್ಷಿತ್ (13) ನಾಪತ್ತೆಯಾಗಿದ್ದಾರೆ. ಜೂ. 21ರಂದು  ಶಾಲೆಗೆ ಹೋದ ತನ್ನ ಮಗ ನಾಪತ್ತೆಯಾಗಿದ್ದು, ಆತನನ್ನು ಪತ್ತೆ ಮಾಡಿಕೊಡುವಂತೆ ಶ್ರೀನಿವಾಸ್ ದೂರು ನೀಡಿದ್ದಾರೆ. ಚಹರೆ- 4.5 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಹುಬ್ಬು ಹಲ್ಲು, ಬಲ ಹಣೆಯ ಮೇಲೆ ಹಳೆಯ ಗಾಯದ ಗುರುತಿದೆ. ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418322 ಸಂಪರ್ಕಿಸಲು ವಿದ್ಯಾರಣ್ಯಪುರಂ ಠಾಣೆ ಎಸ್‌ಐ ಕ್ಯಾತೇಗೌಡ ಕೋರಿದ್ದಾರೆ.

ಸಿಲಿಂಡರ್ ಸೋರಿಕೆ: ವೈದ್ಯೆಗೆ ಗಾಯ
ಮೈಸೂರು: ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ವೈದ್ಯೆಯೊಬ್ಬರು ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಟಿ. ನರಸೀಪುರ ರಸ್ತೆ ಆಲನಹಳ್ಳಿ ಸಮೀಪದ ನೇಜಾತಿ ನಗರ ನಿವಾಸಿ ಡಾ. ಭಾನುಮತಿ (28) ಗಾಯಗೊಂಡವರು. ಬೆಳಗ್ಗೆ ಗ್ಯಾಸ್ ಸ್ಟೌವ್ ಹೊತ್ತಿಸಲು ಹೋದಾಗ ಬೆಂಕಿ ಹೊತ್ತುಕೊಂಡು ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಜರ್‌ಬಾದ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರತ್ಯೇಕ ಪ್ರಕರಣ: ಮೂರು ಕಡೆ ಕಳವು
ಮೈಸೂರು: ನಗರದ ಮೂರು ಕಡೆ ಮನೆ ಬಾಗಿಲು ಮುರಿದು ಕಳವು ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಅಗ್ರಹಾರ ಜಮುನಾ ಬಾರ್ ಹಿಂಭಾಗ ನಿವಾಸಿ ಪ್ರವೀಣ್ ಚೋಪ್ರಾ ಅವರ ಮನೆ ಬಾಗಿಲು ಮುರಿದು 1.05 ಲಕ್ಷ ಮೌಲ್ಯದ 70 ಗ್ರಾಂ. ಚಿನ್ನಾಭರಣ, ನಗದು 10 ಸಾವಿರ, ಲ್ಯಾಪ್‌ಟಾಪ್ ಮತ್ತು ಬೆಳ್ಳಿ ವಸ್ತುಗಳು ಕಳವಾಗಿದೆ. ಪ್ರವೀಣ್ ಉದಯಗಿರಿಯಲ್ಲಿ ಡ್ರೈಫ್ರುಟ್ ಮಳಿಗೆ ನಡೆಸುತ್ತಿದ್ದು, ಜೂ. 30 ರಂದು ರಾಜಸ್ತಾನಕ್ಕೆ ತೆರಳಿದ್ದರು. ವಾಪಸ್ ಬಂದಾಗ ಕಳವಾಗಿರುವುದು ಗೊತ್ತಾಗಿದೆ. ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಲನಹಳ್ಳಿ ಸಮೀಪದ ನಂದಿನಿ ಬಡಾವಣೆಯ 2 ಮನೆಗಳಲ್ಲಿ ಕಳ್ಳತನ ನಡೆದಿದೆ. ಒಂದು ಮನೆಯಲ್ಲಿ ಸುಮಾರು 2 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿದೆ. ಮತ್ತೊಂದು ಮನೆಯ ಮಾಲೀಕರು ಯಾರು ಇಲ್ಲದ ಕಾರಣ ಏನೇನು ಕಳವಾಗಿದೆ ಎಂಬುದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿಲ್ಲ. ಈ ಎರಡು ಪ್ರಕರಣಗಳನ್ನು ನಜರ್‌ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement