ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪೊಲೀಸರಿಗೆ ವೃತ್ತಿಪರತೆ ಅಗತ್ಯ: ಸಿಎಂ

Vishwanath S
Updated On : 7 Jul 2013, 12:17 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 6
ಪ್ರಸ್ತುತ ಉದ್ಭವಿಸುತ್ತಿರುವ ಹೊಸ- ಹೊಸ ಅಪರಾಧ ಹತ್ತಿಕ್ಕಲು, ಹೆಚ್ಚಿನ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಪೊಲೀಸ್ ಅಧಿಕಾರಿಗಳಲ್ಲಿ ವೃತ್ತಿಪರತೆ ಅಗತ್ಯವಾಗಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸಂಜೆ ಕರ್ನಾಟಕ ಪೊಲೀಸ್ ಅಕಾಡೆಮಿ ನೂತನ ಸಭಾಂಗಣ ಉದ್ಘಾಟಿಸಿ ಹಾಗೂ 31ನೇ ತಂಡದ ಆರಕ್ಷಕ ಉಪಾಧೀಕ್ಷಕ (ಡಿವೈಎಸ್ಪಿ) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನವನ್ನು ಅವರು ಪರಿವೀಕ್ಷಿಸಿ ಮಾತನಾಡಿದರು.
ಪೊಲೀಸ್ ಇಲಾಖೆಗೆ ಆಯ್ಕೆಯಾದವರಿಗೆ ತರಬೇತಿ ಅಗತ್ಯ. ನಮ್ಮ ನೆಲದ ಕಾನೂನು, ತನಿಖೆ, ಸಮಾಜದ ಬಾಂಧವ್ಯ ತಿಳಿಯಬೇಕು. ನಾಯಕತ್ವ ಗುಣ ರೂಢಿಸಿಕೊಳ್ಳಬೇಕು. ಇಡೀ ಸಮಾಜದ ಬದುಕನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಹುಮಾನ ವಿತರಣೆ: 31ನೇ ತಂಡದಲ್ಲಿ 25 ಮಂದಿ ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳು ನೇಮಕವಾಗಿದ್ದು, ಇವರಲ್ಲಿ ಇಬ್ಬರು ತರಬೇತಿ ಮಧ್ಯದಲ್ಲೇ ಬಿಟ್ಟು ಹೋಗಿದ್ದಾರೆ. ಉಳಿದ 23 ಮಂದಿಗೆ ಒಳಾಂಗಣ, ಹೊರಾಂಗಣ ಸೇರಿದಂತೆ ವಿವಿಧ ತರಬೇತಿ ನೀಡಲಾಗಿದೆ.
ಇವರಲ್ಲಿ ಒಳಾಂಗಣ ಅತ್ಯುತ್ತಮ ಪ್ರಶಸ್ತಿ- ಗೃಹ ಮಂತ್ರಿ ಕಪ್ ಬಾಬಸಾಹೇಬ ನೇಮಗೌಡ, ಹೊರಾಗಂಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ- ಡಿಜಿ ಮತ್ತು ಐಜಿಪಿ ಕಪ್ ಎಂ.ಎ. ಅಯ್ಯಪ್ಪ, ಉತ್ತಮ ರೈಫಲ್ ಶೂಟಿಂಗ್ ಹಾಗೂ ಸರ್ವೋತ್ತಮಮ ಮಹಿಳಾ ಪ್ರಶಿಕ್ಷಣಾರ್ಥಿ- ಗೃಹಮಂತ್ರಿ ಟ್ರೋಫಿ ಅನುಪಮ ಶೆಣೈ, ಉತ್ತಮ ರಿವಾಲ್ವರ್ ಶೂಟಿಂಗ್ ಪಿ.ವಿ. ಸ್ನೇಹ ಅವರು ಪ್ರಶಸ್ತಿ ಪಡೆದುಕೊಂಡರು.
ಸರ್ವೋತ್ತಮ ಪ್ರಶಿಕ್ಷಣಾರ್ಥಿ- ಮುಖ್ಯಮಂತ್ರಿ ಟ್ರೋಫಿ, ಮುಖ್ಯಮಂತ್ರಿ ಸ್ವೋರ್ಡ್, ಡಿಜಿ ಮತ್ತು ಐಜಿಪಿ ಬೇಟನ್ ಪ್ರಶಸ್ತಿಯನ್ನು ಪ್ರಸನ್ನ ದೇಸಾಯಿ ಅವರಿಗೆ ನೀಡಲಾಯಿತು. ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಎಚ್.ಪಿ. ಮಂಜುನಾಥ್, ವಾಸು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಖುಮಾ ಪಚಾವೋ, ಪೊಲೀಸ್ ತರಬೇತಿ ಮಹಾ ನಿರ್ದೇಶಕ ಸುಶಾಂತ್ ಮಹಾಪಾತ್ರ, ಗುಪ್ತಚರ ಮಹಾ ನಿರ್ದೇಶಕ ಎ.ಎಂ. ಪ್ರಸಾದ್, ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್, ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಕೆಪಿಎ ನಿರ್ದೇಶಕ ಎ.ಎಸ್.ಎನ್. ಮೂರ್ತಿ, ಡಾ. ಧರಣಿದೇವಿ ಮಾಲಗತ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement