ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೀನುಗಾರರಿಗೆ ಪರಿಕರ ವಿತರಣೆ

Vishwanath S
Updated On : 7 Jul 2013, 12:27 pm

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಜು. 6
ತಾಲೂಕಿನಲ್ಲಿ ಮೀನುಗಾರಿಕೆಯ ತರಬೇತಿ ಪಡೆದ 60 ಮಂದಿಗೆ ಬಲೆ, ತಕ್ಕಡಿ ಮತ್ತು ಇತರ ಪರಿಕರಗಳನ್ನು ವಿತರಿಸುತ್ತಿದ್ದು, ಮುಂದೆಯೂ ಅರ್ಹರಿಗೆ ಹಂತ- ಹಂತವಾಗಿ ಅಗತ್ಯ ಪರಿಕರಗಳನ್ನು ಆದ್ಯತೆ ಮೇಲೆ ನೀಡಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್ ಭರವಸೆ ನೀಡಿದರು.
ಇಲ್ಲಿನ ಮೀನುಗಾರಿಕಾ ಸಹಾಯಕ ನಿರ್ದೇಶಕ ಕಚೇರಿಯ ಆವರಣದಲ್ಲಿ ಮೀನುಗಾರರಿಗೆ ಪರಿಕರ ವಿತರಿಸಿ ಮಾತನಾಡಿ, ವೃತ್ತಿಪರ ಮೀನುಗಾರರು ಮತ್ತು ಪರವಾನಗಿ ಪಡೆದಿರುವವರು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವೀಣಾಕುಮಾರ್, ಮೀನುಗಾರಿಕಾ ಸಹಾಯಕ ನಿರ್ದೇಶಕಿ ಭವಾನಿ, ತಾಪಂ ಮಾಜಿ ಉಪಾಧ್ಯಕ್ಷರಾದ ಹಾಡ್ಯ ಮಹದೇವಸ್ವಾಮಿ, ಮೇಲೂರು ಕೃಷ್ಣೆಗೌಡ, ಮುಖಂಡರಾದ ಧನಂಜಯ, ಪುಟ್ಟರಾಜು, ಹರಿಚಿದಂಬರ, ರಮೇಶ್, ಬಿಇಒ ಜವರೇಗೌಡ, ಸಾ.ರಾ. ಸ್ನೇಹ ಬಳಗದ ಕಾರ್ಯದರ್ಶಿ ಆನಂದ್ ಸೇರಿದಂತೆ ಇತರ ಗಣ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement