ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಾರಿ ಡಿಕ್ಕಿ: ಮನೆಗೆ ಹಾನಿ

Vishwanath S
Updated On : 7 Jul 2013, 12:27 pm

ಕ.ಪ್ರ.ವಾರ್ತೆ ,  ಟಿ.ನರಸೀಪುರ ,  ಜು. 6
ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಅಡ್ಡಾದಿಡ್ಡಿ ಸಂಚರಿಸಿ ಮೂರು ಮನೆಗಳನ್ನು ಹಾನಿಗೊಳಿಸಿರುವ ಘಟನೆ ತಾಲೂಕಿನ ಬಿಲಿಗೆರೆಹುಂಡಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಮನೆಯಲ್ಲಿ ಯಾರೂ ವಾಸವಿರದ ಕಾರಣ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಮರಳು ತುಂಬಿದ ಲಾರಿ ಅತಿ ವೇಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಎರಡು ಜೋಡಿ ಮನೆಗಳಿಗೆ ತೀವ್ರ ಹಾನಿಯಾಗಿದೆ. ಪಕ್ಕದಲ್ಲಿದ್ದ ಮತ್ತೊಂದು ಮನೆ ಸ್ವಲ್ಪ ಪ್ರಮಾಣದಲ್ಲಿ ಹಾನಿಗೊಳಗಾಗಿದೆ.
ತಾಲೂಕಿನ ಬಿಲಿಗೆರೆಹುಂಡಿ ಗ್ರಾಮಕ್ಕೆ ಮುಂಜಾನೆ ನಾಲ್ಕರ ವೇಳೆಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಲಾರಿಯೊಂದು ಸಂಚರಿಸುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಲಾರಿಯನ್ನು ಹಿಡಿಯಲು ಬಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ಅವರನ್ನು ಕಂಡು ಚಾಲಕ ತಪ್ಪಿಸಿಕೊಳ್ಳಲು ಲಾರಿಯನ್ನು ಗ್ರಾಮದೊಳಗಿನ ರಸ್ತೆಯ ಕಡೆಗೆ ತಿರುಗಿಸಿದ್ದಾರೆ. ವೇಗವಾಗಿ ಸಂಚರಿಸಿದ ಲಾರಿ ಆಯತಪ್ಪಿ ರಸ್ತೆಯ ಬದಿಯಲ್ಲಿದ್ದ ನಂಜೇಗೌಡ, ಸಿದ್ದರಾಮೇಗೌಡ, ನಿಂಗಮ್ಮ ಹಾಗೂ ಮೀನಾಕ್ಷಿ ಶಿವಣ್ಣ ಎಂಬವರಿಗೆ ಸೇರಿದ ಮೂರು ಮನೆಗಳು ಹಾನಿಗೊಂಡವು.
ಘಟನೆಯ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಮರಳು ತುಂಬಿದ ಲಾರಿಯನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮರಳು ಲಾರಿ ಅಡ್ಡಾದಿಡ್ಡಿ ಸಂಚಾರದಿಂದ ಹಾಳಾಗಿರುವ ಮನೆಗಳನ್ನು ದುರಸ್ತಿಗೊಳಿಸಿಕೊಡಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಆರ್. ಮಹದೇವು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement