ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಾಮೀಣರಿಗೂ ಪರಿಸರ ಶಿಕ್ಷಣ ದೊರಕಲಿ

Vishwanath S
Updated On : 8 Jul 2013, 12:09 pm

ಕ.ಪ್ರ.ವಾರ್ತೆ , ಮೈಸೂರು , ಜು. 7
ಮೃಗಾಲಯ ನಡೆಸುತ್ತಿರುವ ಪರಿಸರ ಸಂರಕ್ಷಣೆ ಕುರಿತಾದ ಶೈಕ್ಷಣಿಕ ಕಾರ್ಯಕ್ರಮ ಗ್ರಾಮೀಣ ಪ್ರದೇಶದ ಮಕ್ಕಳಿಗೂ ದೊರಕುವಂತಾಗಬೇಕು ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಹೇಳಿದರು.
ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಯುವ ಸಂಘಟನೆ- 2013 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ರಕ್ಷಣೆ ಮತ್ತು ವನ್ಯಜೀವಿಗಳ ಕುರಿತಾದ ಹಲವು ವಿಸ್ಮಯಕಾರಿ ಮಾಹಿತಿ ಒಳಗೊಂಡ ಈ ಕಾರ್ಯಕ್ರಮ ಕೇವಲ ನಗರವನ್ನು ಕೇಂದ್ರೀಕರಿಸದೆ ಸುತ್ತಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೂ ದೊರಕುವಂತಾಗಬೇಕು. ರಾಜ್ಯದಲ್ಲಿ ಮೈಸೂರು ಮೃಗಾಲಯ ಮಾತ್ರ ಇಂತಹ ವಿಶಿಷ್ಟ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕು. ಯುವ ಪೀಳಿಗೆಗೆ ಪರಿಸರ ಕುರಿತ ಇಂಥ ಕಾರ್ಯಕ್ರಮ ಅಗತ್ಯವಿದೆ. ಮಕ್ಕಳಿಗಾಗಿ ಆಯೋಜಿಸಿರುವ ಈ ಶಿಬಿರಕ್ಕೆ ಪೋಷಕರು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ನನ್ನ ಈ ಇಂದಿನ ಸಾಧನೆಗೆ ಪೋಷಕರ ಪ್ರೋತ್ಸಾಹ ಕಾರಣ. ಆದ್ದರಿಂದ ವಿದ್ಯಾರ್ಥಿಗಳು ಇಲ್ಲಿ ತಿಳಿದ ವಿಷಯವನ್ನು ತಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಬೇಕು ಎಂದರು.
ಸ್ವಾರ್ಥ ಬಿಟ್ಟು ನಿಸ್ವಾರ್ಥದಿಂದ ಇದ್ದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ಇರುವ ಪರಿಸರ ಸಂಪತ್ತು ನಮಗೆ ಎಂದು ತಿಳಿದಾಗ ಮಾತ್ರ ಪರಿಸರ ನಾಶವಾಗುತ್ತದೆ ಎಂದ ಅವರು, ಅದೃಷ್ಟ ಎಂಬುದು ದೇವರು ಕೊಡುವುದಲ್ಲ. ಬದಲಿಗೆ ದೇವರು ಆಶೀರ್ವಾದ ಮಾತ್ರ ಮಾಡುತ್ತಾನೆ. ನಾವು ನಮಗೆ ದೊರಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಯಶಸ್ಸು ಲಭ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರ ಮಾತನಾಡಿ, ತೀರಾ ಮಿತವಾದ ಪ್ರಾಕೃತಿಕ ಸಂಪತ್ತನ್ನು ನಮ್ಮ ಹಿರಿಯರು ನಮಗಾಗಿ ಉಳಿಸಿದ್ದಾರೆ. ನಾವು ಅದನ್ನು ಸರಿಯಾದ ರೀತಿಯಲ್ಲಿ ಮಿತವಾಗಿ ಬಳಸಿಕೊಂಡಾಗ ಮಾತ್ರ ನಮ್ಮ ನಂತರದ ಪೀಳಿಗೆ ಬದುಕಲು ಸಾಧ್ಯ. ಆದ್ದರಿಂದ ಪರಿಸರ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮೃಗಾಲಯವು ಮಕ್ಕಳಿಗೆ ಈ ಶಿಬಿರ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.
ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ, ಶಿಬಿರ ಸಂಯೋಜಕ ಮರಡಿಮನಿ ಇದ್ದರು.
ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕು. ಯುವ ಪೀಳಿಗೆಗೆ ಪರಿಸರ ಕುರಿತ ಇಂಥ ಕಾರ್ಯಕ್ರಮ ಅಗತ್ಯವಿದೆ. ಮಕ್ಕಳಿಗಾಗಿ ಆಯೋಜಿಸಿರುವ ಈ ಶಿಬಿರಕ್ಕೆ ಪೋಷಕರು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ನನ್ನ ಈ ಇಂದಿನ ಸಾಧನೆಗೆ ಪೋಷಕರ ಪ್ರೋತ್ಸಾಹ ಕಾರಣ. ಆದ್ದರಿಂದ ವಿದ್ಯಾರ್ಥಿಗಳು ಇಲ್ಲಿ ತಿಳಿದ ವಿಷಯವನ್ನು ತಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಬೇಕು.
- ಅಶ್ವಿನಿ ನಾಚಪ್ಪ, ಅಂತರಾಷ್ಟ್ರೀಯ ಕ್ರೀಡಾಪಟು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement