ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವು ದೂರು

Vishwanath S
Updated On : 8 Jul 2013, 12:11 pm

ಕ.ಪ್ರ.ವಾರ್ತೆ , ನಂಜನಗೂಡು , ಜು. 7
ಪಟ್ಟಣದ ತಾಪಂ ಆವರಣದಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದವು.
ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬದ ತೆರವಿಗಾಗಿ ಸೆಸ್ಕ್ ಕಚೇರಿಯ ಎಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಆದರೂ ಕಂಬದ ತೆರವಿಗೆ ಕ್ರಮ ಕೈಗೊಂಡಿಲ್ಲ. ಜನರು ದೂರು ನೀಡುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ನಗರ್ಲೆ ಗ್ರಾಮದಲ್ಲಿ ಬೀದಿ ದೀಪಗಳು ಹಗಲು ಹೊತ್ತಿನಲ್ಲೂ ಉರಿಯುತ್ತವೆ. ರಸ್ತೆ ಹಾಗೂ ಚರಂಡಿಗಳಲ್ಲಿ ಕಸ ತುಂಬಿ ತುಳುಕುತ್ತಿದರೂ ಗ್ರಾಪಂ ಎಂದು ನಗರ್ಲೆ ಗ್ರಾಮದ ವಿಜಯಕುಮಾರ್ ದೂರಿದರು.
ನಂಜನಗೂಡು ಪಟ್ಟಣದ ಪ್ರಶಾಂತ್, ಶಂಕರ್, ಲತಾ ಎಂಬವರು ರಾಮಶೆಟ್ಟಿ ಬಡಾವಣೆ, ಪೊಲೀಸ್ ವಸತಿಗೃಹ ಕಾಲೋನಿ ಇನ್ನಿತರ ಭಾಗಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿರುವ ಬಗ್ಗೆ ಅಹವಾಲು ಸಲ್ಲಿಸಿದರು.
ಗೌಡರಹುಂಡಿ ಗ್ರಾಮದ ಮಹೇಶ್ ಎಂಬವರು, ಕುಡಿಯುವ ನೀರಿನ ತೊಂದರೆ ತಪ್ಪಿಸಿ ಮತ್ತು ರೇಷನ್ ಕಾರ್ಡ್ ಗೊಂದಲ ನಿವಾರಿಸಿ ಎಂದು ಮನವಿ ಮಾಡಿದರು.
ದೇಬೂರು ಗ್ರಾಮದ ನಾಗಣ್ಣ ಎಂಬವರು ಪಿಡಿಒ ನೇಮಿಸುವಂತೆ, ಹೆಡತಲೆ ಗ್ರಾಮದ ರೇಷನ್ ಕಾರ್ಡ್ ವಿತರಿಸುವಂತೆ ಕೋರಿದರು. ಕಳಲೆ ಗ್ರಾಮದ ಗೋವಿಂದರಾಜು, ಮಲ್ಕುಂಡಿ ಗ್ರಾಮದ ಶಿವರಾಜು, ಹಂಚೀಪುರ ಗ್ರಾಮದ ಸುಜಾತಾ, ಕುರಿಹುಂಡಿ ಗ್ರಾಮದ ರವಿ, ಮುದ್ದಹಳ್ಳಿ ಗ್ರಾಮದ ರಮೇಶ್ ಹಲವು ಸಮಸ್ಯೆಗಳನ್ನು ಹೇಳಿಕೊಂಡರು. ಒಟ್ಟಾರೆಯಾಗಿ 19 ಕರೆಗಳು ಬಂದಿದ್ದವು. ತಾಪಂ ಇಒ ಅನುಪಸ್ಥಿತಿಯಲ್ಲಿ ವ್ಯವಸ್ಥಾಪಕ ನಂಜುಂಡಸ್ವಾಮಿ ದೂರು ಸ್ವೀಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement