ಸ್ನೇಹಿತನ ಮನೆಗೆ ಸಿಎಂ ಭೇಟಿ
ಮೈಸೂರು: ಇತ್ತೀಚಿಗೆ ನಿಧನರಾದ ಸ್ನೇಹಿತ ಹಾಲಿನ ರಾಮಣ್ಣ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ರಾತ್ರಿ ಭೇಟಿ ನೀಡಿ, ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಹಾಲಿನ ರಾಮಣ್ಣ ನಿಧನರಾದಾಗ ದೆಹಲಿಯಿಂದ ಮೈಸೂರಿಗೆ ಸಿದ್ದರಾಮಯ್ಯ ಧಾವಿಸಿದ್ದರು. ಅವರ ನಿಧನದ ಬಳಿಕ ಮತ್ತೆ ಮನೆಗೆ ಭೇಟಿ ನೀಡಿರಲಿಲ್ಲ. ಇಟ್ಟಿಗೆಗೂಡಿನಲ್ಲಿರುವ ರಾಮಣ್ಣ ಮನೆಗೆ ದಿಢೀರ್ ಭೇಟಿ ನೀಡಿದ ಸಿದ್ದರಾಮಯ್ಯ ಕುಟುಂಬದವರೊಂದಿಗೆ ಸ್ವಲ್ಪ ಹೊತ್ತು ಕಳೆದರು. ಬಳಿಕ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ ಊಟ ಮಾಡಿದರು.