ಕಾರು- ಬೈಕ್ ಡಿಕ್ಕಿ: ಇಬ್ಬರ ಸಾವು
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಜು. 8
ಸರ್ಕಾರಿ ಕಾರು- ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಕೆ.ಜಿ. ಹಳ್ಳಿ ಗ್ರಾಮದ ವೃತ್ತದ ಬಳಿ ಸೋಮವಾರ ಜರುಗಿದೆ. ಕೇರಳ ರಾಜ್ಯದ ಕಾಟಿಕೊಳಂನ ಕುಟ್ಟಾಯಿ (25), ಕಾಟಿಕೊಳಂನ ವಾಹನ ತಪಾಸಣೆ ಅಧಿಕಾರಿ ಅಬ್ರಾಹಂ (33) ಮೃತಪಟ್ಟ ದುರ್ದುವಿಗಳು. ಕುಟ್ಟಾಯಿ ಸ್ಥಳದಲ್ಲೇ ಮೃತಪಟ್ಟರೆ ಅಬ್ರಾಹಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹ್ಯಾಂಡ್ ಪೋಸ್ಟ್ ಕಡೆಯಿಂದ ಬೀಚನಹಳ್ಳಿ ಕಡೆಗೆ ತೆರಳುತ್ತಿದ್ದ ಸರ್ಕಾರಿ ಕಾರು ಕೇರಳ ಕಡೆಯಿಂದ ಬರುತ್ತಿದ್ದ ಬೈಕ್ ಮಧ್ಯೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಜಿಲ್ಲಾಧಿಕಾರಿಗಳ ಶಿಷ್ಟಾಚಾರ ವಿಭಾಗಕ್ಕೆ ಸೇರಿದ ಈ ಸರ್ಕಾರಿ ವಾಹನದಲ್ಲಿ ಯಾರು ಇದ್ದರೆಂದು ತಿಳಿದು ಬಂದಿಲ್ಲ. ಆದರೆ, ಗ್ರಾಮದ ಕೆಲವರು ಕಾರಿನಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಹುಣಸೂರು ಡಿವೈಎಸ್ಪಿ ಮುದ್ದುಮಹದೇವಯ್ಯ, ಎಸ್ಐ ಶಿವಮಾದಯ್ಯ, ತಹಸೀಲ್ದಾರ್ ಕೃಷ್ಣ ಸ್ಥಳಕ್ಕೆ ಭೇಟಿ ನೀಡಿದ್ದರು.