ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಘವಾಂಕನ 2 ಅನುಪಲಬ್ಧ ಕೃತಿ ಭಾಗ ಬೆಳಕಿಗೆ

Mainashree
Updated On : 8 Jul 2013, 10:13 am

ಮೈಸೂರು: ಈವರೆಗೆ ಅನುಪಲಬ್ಧವಾಗಿದ್ದ ರಾಘವಾಂಕನ ಎರಡು ಮಹತ್ವದ ಕೃತಿಗಳಾದ 'ಶರಭಚಾರಿತ್ರ್ಯ' ಹಾಗೂ 'ಹರಿಹರ ಮಹತ್ವ'ದ ಭಾಗಗಳು ಬೆಳಕಿಗೆ ಬಂದಿವೆ.
ಮಧ್ಯಕಾಲಿನ ಕನ್ನಡ ಸಾಹಿತ್ಯದ ಮಹತ್ವ ಕವಿಯಾಗಿದ್ದ ರಾಘವಾಂಕ ಷಟ್ಪದಿ ಬ್ರಹ್ಮನೆಂಬ ಕೀರ್ತಿಗೆ ಪ್ರಾತ್ರವಾಗಿದ್ದು, ಒಟ್ಟು 6 ಕೃತಿಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಹರಿಶ್ಚಂದ್ರಚಾರಿತ್ರ್ಯ, ಸೋಮನಾಥಚಾರಿತ್ರ್ಯ, ಸಿದ್ಧರಾಮಚಾರಿತ್ರ್ಯ ಮತ್ತು ವೀರೇಶಚರಿತೆ ಕೃತಿಗಳು ದೊರತಿವೆ. ಆದರೆ, ಆತನ ಹರಿಹರಮಹತ್ವ ಹಾಗೂ ಶರಭಚಾರಿತ್ರ್ಯ ಇದುವರಿಗೆ ಲಭ್ಯವಾಗಿರಲಿಲ್ಲ. ಮೈಸೂರು- ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಗೌರವ ಪ್ರಾಧ್ಯಾಪಕ ಜಗಲೂರು ಎಂ. ವೀರಭದ್ರಸ್ವಾಮಿ ಅವರು ಶರಭಚಾರಿತ್ರ್ಯ ಮತ್ತು ಹರಿಹರಮಹತ್ವ ಕೃತಿಗಳ ಅಸಮಗ್ರ ಉಲ್ಲೇಖಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಉಕ್ಕಿನಕಂತೆ ಮಠದ ಓಲೆಗರಿಗಳ ಕಟ್ಟಿನಲ್ಲಿ ಇವು ದೊರೆತಿದ್ದು, ಇಲ್ಲಿರುವ ಪದ್ಯಗಳ ಸಹಾಯದಿಂದ ಈ ಎರಡು ಕೃತಿಗಳ ಕಥಾವಸ್ತು, ಶೈಲಿಯನ್ನು ಸ್ಪಷ್ಟವಾಗಿ ಅರಿಯಬಹುದಾಗಿದೆ. ಇದುವೇ ಮೊದಲ ಉಪಲಬ್ಧ ಉಲ್ಲೇಖ ಪದ್ಯಗಳಾಗಿದ್ದು, ಅಧ್ಯಯನ ದೃಷ್ಟಿಯಿಂದ ಅತ್ಯಂತ ಮಹತ್ವದಾಗಿದೆ ಎಂದು ತಿಳಿಸಿದ್ದಾರೆ.
ಉಲ್ಲೇಖ ಸಂಪಾದಿಸಿರುವ ಎಂ. ವೀರಭದ್ರಸ್ವಾಮಿ ಅವರನ್ನು ವಿದ್ವಾಂಸ ಬಿ.ಎಸ್. ಸಣ್ಣಯ್ಯ ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ವಿ. ಶಾಂಬಶಿವಯ್ಯ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement