'ಈ ಊರಿನಲ್ಲಿ ಕಳ್ಳರೇ ಇಲ್ಲ' ನಾಟಕ
ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ರಂಗವಲ್ಲಿ ತಂಡವು ಜು. 11, 12 ಮತ್ತು 13ರ ಸಂಜೆ 6.30ಕ್ಕೆ ಈ ಊರಿನಲ್ಲಿ ಕಳ್ಳರೇ ಇಲ್ಲ ನಾಟಕ ಪ್ರದರ್ಶಿಸಲಿದೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ಲ್ಯಾಟೀನ್ ಅಮೆರಿಕ ಲೇಖಕ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ಕತೆ ಆಧಾರಿತ ಈ ನಾಟಕವನ್ನು ಎಚ್.ಕೆ. ದ್ವಾರಕಾನಾಥ್ ನಿರ್ದೇಶಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ
ಇಲ್ಲಿನ ಭಾರತೀಯ ವೈದ್ಯಕೀಯ ಸಂಘ, ವಾಸನ್ ಐ ಕೇರ್ ಆಸ್ಪತ್ರೆಯ ಸಹಯೋಗದಲ್ಲಿ ಜು. 12ರ ಸಂಜೆ 7.30ಕ್ಕೆ ಬೆಂಗಳೂರು-ನೀಲಗಿರಿ ರಸ್ತೆಯ ಹಾರ್ಡಿಂಜ್ ವೃತ್ತದಲ್ಲಿರುವ ಯುನೈಟೆಡ್ 21ನಲ್ಲಿ ವೈದ್ಯರುಗಳಿಗೆ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಏರ್ಪಡಿಸಿದೆ.
ವಿದ್ಯಾರ್ಥಿ ಸಂಸತ್ ಸ್ಥಾಪನೆ
ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಜು. 13ರ ಬೆಳಗ್ಗೆ 11ಕ್ಕೆ ವಿದ್ಯಾರ್ಥಿ ಸಂಸತ್ ಸ್ಥಾಪನೆ ಕಾರ್ಯಕ್ರಮವನ್ನು ಕಾಲೇಜಿನ ಡಾ. ಎಪಿಜೆ ಅಬ್ದುಲ್ ಕಲಾಂ ಸಿಲ್ವರ್ ಜ್ಯೂಬ್ಲಿ ಸಭಾಂಗಣದಲ್ಲಿ ಏರ್ಪಡಿಸಿದೆ. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಉದ್ಘಾಟಿಸಲಿದ್ದು, ಮೈಸೂರು ವಿವಿ ಕುಲಸಚಿವ ಬಸವರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಹಾಜನ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ ಆರ್. ವಾಸುದೇವಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯದರ್ಶಿ ಡಾ. ಪಿ.ಆರ್. ನಾಗಾಶ್ರೀನಿವಾಸ ಭಾಗವಹಿಸುವರು.
ಇಂಟೀರಿಯರ್ ಡಿಸೈನ್ಸ್ ತರಗತಿ
ಮೈಸೂರು ಇಂಟೀರಿಯರ್ಸ್ ಆ್ಯಂಡ್ ಡಿಸೈನ್ಸ್ ಅಕಾಡೆಮಿ- ವಿದ್ಯಾಕೇಂದ್ರ, ರಾಜ್ಯ ಮುಕ್ತ ವಿವಿ ಸಹಯೋಗದೊಂದಿಗೆ ಒಂದು ವರ್ಷದ ಅವಧಿಯ ಇಂಟೀರಿಯರ್ ಡಿಸೈನ್ಸ್ ತರಗತಿ ನಡೆಯಲಿದೆ. ಜು. 15ರ ಬೆಳಗ್ಗೆ 11ಕ್ಕೆ ತರಗತಿ ಉದ್ಘಾಟನೆಯಾಗಲಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ದೂ. 4256549, ಮೊ. 9035336060 ಸಂಪರ್ಕಿಸಬಹುದು.