ದಲಿತರ ಹಕ್ಕುಗಳ ಸಮಿತಿ ಪ್ರತಿಭಟನೆ
ಕ.ಪ್ರ.ವಾರ್ತೆ ಟಿ.ನರಸೀಪುರ ಜು. 9
ದಲಿತರ ಹಕ್ಕಿಗಾಗಿ ಒತ್ತಾಯಿಸಿ ತಾಲೂಕು ಕಚೇರಿ ಎದುರು ಮಂಗಳವಾರ ದಲಿತ ಹಕ್ಕುಗಳ ಸಮಿತಿಯ ಕಾರ್ಯಕರ್ತರು ಪ್ರತಿಭಟಿಸಿದರು.
ಇಲ್ಲಿನ ತಾಲೂಕು ಕಚೇರಿ ಎದುರು ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಹಾಗೂ ಮುಖಂಡರು ರಾಜ್ಯ ಸಮಿತಿ ರಾಜ್ಯಾದ್ಯಂತ ದಿನ- ದಲಿತರ ಹಕ್ಕಿಗಾಗಿ ಪ್ರತಿಭಟಿಸಿದರು. ಜಾತಿ ತಾರತಮ್ಯ ಅಸ್ಪೃಶ್ಯತೆ ಆಚರಣೆ ತಡೆಗಟ್ಟುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.
ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷೆ ತಲಕಾಡು ಶಂಕರದೇವಮ್ಮ, ಕಾರ್ಯದರ್ಶಿ ಮಹದೇವಮ್ಮ, ಡಿವೈಎಫ್ಐ ಅಧ್ಯಕ್ಷ ಸಿ. ಪುಟ್ಟಮಲ್ಲಯ್ಯ, ಸಿದ್ದಮ್ಮ, ಲಕ್ಷ್ಮೀ, ರಾಜಮ್ಮ, ಭಾಗ್ಯಮ್ಮ, ಪಾರ್ವತಮ್ಮ, ಮಹದೇವಮ್ಮ, ಮಂಗಳ, ಕಾಂತಮ್ಮ ಭಾಗವಹಿಸಿದ್ದರು.