ನೇರಳಕಪ್ಪೆ ಸಹಕಾರ ಸಂಘಕ್ಕೆ ಲಾಭ
ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಶಂಕುಸ್ಥಾಪನೆಯನ್ನು ಮೈಸೂರು-ಚಾಮರಾಜನಗರ ಹಾಲು ಒಕ್ಕೂಟದ ವಿಸ್ತೀರ್ಣಾಧಿಕಾರಿ ಸೋಮಶೇಖರ್ ನೆರವೇರಿಸಿದರು.
ಹುಣಸೂರು: ಕಳೆದ 6 ವರ್ಷಗಳ ಹಿಂದೆ ತುಂಬಾ ನಷ್ಟದಲ್ಲಿದ್ದ ನೇರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಸ್ತುತವಾಗಿ 5 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿ, ಉತ್ತಮವಾಗಿ ವ್ಯವಹಾರ ನಡೆಸಲು ಆಡಳಿತ ಮಂಡಳಿ ಹಾಗೂ ಹಾಲೂ ಉತ್ಪಾದಕರ ಸಹಕಾರವೆ ಕಾರಣ ಎಂದು ಮೈಸೂರು- ಚಾಮರಾಜನಗರ ಹಾಲು ಒಕ್ಕೂಟದ ವಿಸ್ತೀರ್ಣಾಧಿಕಾರಿ ಸೋಮಶೇಖರ್ ಪ್ರಶಂಸಿದರು.
ತಾಲೂಕಿನ ನೇರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಸ್ವಂತ ಕಟ್ಟಡ ನಿರ್ಮಿಸಲು 5.50 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮೈಸೂರು-ಚಾಮರಾಜನಗರ ಹಾಲು ಒಕ್ಕೂಟದಲ್ಲಿಯೇ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಸರಬರಾಜುವಾಗುತ್ತಿರುವ ಹಾಲು ಕಲಬೆರಕೆ ಇಲ್ಲ, ಗುಣಮಟ್ಟದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದೆ ರೀತಿ ಈ ಸಂಘವು ಗುಣಮಟ್ಟದ ಹಾಲು ಸರಬರಾಜು ಮಾಡಿ ಹೆಚ್ಚು ಲಾಭದಾಯಕದಲಿದೆ ಎಂದು ಹೇಳಿದರು.
ನೂತನ ಕಟ್ಟಡ ನಿರ್ಮಾಣಕ್ಕೆ ಮೈಮುಲ್ ನಿರ್ದೇಶಕ ಕೆ.ಎಸ್. ಕುಮಾರ್, ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ 2 ಲಕ್ಷ ಅನುದಾನ ಮಂಜೂರು ಮಾಡಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಹಾಗೂ ತಾ.ಪಂ. ಸದಸ್ಯ ಕೆ. ಗಣಪತಿ ಮಾತನಾಡಿದರು. ಸಂಘದ ನಿರ್ದೇಶಕರಾದ ಎಚ್.ಆರ್. ಗುರುರಾಜ್, ಜಿ.ಎಂ. ದೇವಯ್ಯ, ಎಚ್.ಎಂ. ಭೋಜಪ್ಪ, ಗ್ರಾಪಂ ಅಧ್ಯಕ್ಷೆ ಮುತ್ತಮ್ಮ, ಹನಗೋಡು ಸಹಕಾರ ಬ್ಯಾಂಕ್ ಅಧ್ಯಕ್ಷ ಲೋಕೇಶ್, ಮುಖಂಡರಾದ ಚಂದ್ರೇಗೌಡ, ಸುಬ್ರಮಣ್ಯ, ದಿನೇಶ್, ಸಂಘದ ಕಾರ್ಯದರ್ಶಿ ಗಣೇಶ ಇದ್ದರು.