ಬನ್ನೂರು ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಟಿ. ನರಸೀಪುರ: ಬನ್ನೂರು ಉಪ ವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಕಾಮಗಾರಿ ಇರುವುದರಿಂದ ಜು. 11ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬನ್ನೂರಿನ 66,11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ನಿರ್ವಹಿಸುವುದರಿಂದ ಜು. 11ರ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಬನ್ನೂರು ಪಟ್ಟಣ, ಸುತ್ತಮುತ್ತಲ ಪ್ರದೇಶ, ಚಾಮನಹಳ್ಳಿ ಮತ್ತು ಮಾಕನಹಳ್ಳಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ನಂಜನಗೂಡು ವಿಭಾಗದ ಸೆಸ್ಕ್ ಇಇ ಮನವಿ ಮಾಡಿದ್ದಾರೆ.