ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಡಾನೆ ದಾಳಿ:ಬೆಳೆ ಹಾನಿ

Rashmi Kasaragodu
Updated On : 12 Jul 2013, 1:04 am

ಹಲಗೂರು: ಇಲ್ಲಿಗೆ ಸಮೀಪದ ಕರಲಕಟ್ಟೆಯ ಮುತ್ತೇಗೌಡ ಎಂಬವರ ಬಾಳೆ ತೋಟಕ್ಕೆ ಬುಧವಾರ ರಾತ್ರಿ 9 ಕಾಡಾನೆಗಳ ಹಿಂಡು ದಾಳಿ ನಡೆಸಿ, ಬಾಳೆ ಗಿಡಗಳನ್ನು ತಿಂದು ನಾಶಪಡಿಸಿವೆ. ಇದರಿಂದ ಸುಮಾರ 2 ಲಕ್ಷ ನಷ್ಟ ಸಂಭವಿಸಿದೆ.
ಎರಡೂವರೆ ಎಕರೆ ಜಮೀನಿನಲ್ಲಿ ನೆಡಲಾಗಿದ್ದ 2000 ಬಾಳೆಗಿಡಗಳು ಫಸಲು ಬಿಡುವ ಹಂತದಲ್ಲಿದ್ದವು. ಆದರೆ, ಬಸವನಬೆಟ್ಟದ ದಟ್ಟ ಅರಣ್ಯದಿಂದ ಸೊಲಬ ಗ್ರಾಮದ ಮಾರ್ಗವಾಗಿ ಬಂದ 9 ಆನೆಗಳ ಹಿಂಡು ಬಾಳೆ ಗಿಡಗಳನ್ನು ತಿಂದಿವೆ. ಕೆಲವನ್ನು ಮುರಿದು ನಾಶಪಡಿಸಿವೆ.
ಆಗ್ರಹ:    ಫಸಲು ಕೈ ಸೇರುವ ಹೊತ್ತಿಗೆ ಮುತ್ತತ್ತಿ ಕಾಡಿನಿಂದ ಹಾಗೂ ಬಸವನಬೆಟ್ಟದ ಕಾಡಿನಿಂದ ಬರುವ ಆನೆಗಳ ಬಾಯಿಗೆ ಬೆಳೆ ಆಹಾರವಾಗಿ ರೈತರ ಶ್ರಮಕ್ಕೆ ಬೆಲೆ ಇಲ್ಲದಂತಾಗುತ್ತಿದೆ. ಬೆಳೆ ಪರಿಹಾರವನ್ನು ಸೂಕ್ತ ರೀತಿಯಲ್ಲಿ ನೀಡಬೇಕು ಎಂದು ಗ್ರಾಮದ ರಮೇಶ್, ಕೆ.ಟಿ. ಬಾಲಾಜಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement