ತಂತಿ ಸೇವೆ ಸ್ಥಗಿತ ವಿರುದ್ಧ ಇಂದು ಧರಣಿ
ಮೈಸೂರು: ತಂತಿ (ಟೆಲಿಗ್ರಾಫ್) ಸೇವೆ ಸ್ಥಗಿತಗೊಳಿಸಿರುವ ನಿರ್ಧಾರದ ವಿರುದ್ಧ ಬಿಎಸ್ಎನ್ಎಲ್ ನೌಕರರ ಸಂಘದವರು ಜು.12ರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಜಯಲಕ್ಷ್ಮಿಪುರಂನಲ್ಲಿರುವ ಬಿಎಸ್ಎನ್ಎಲ್ ಮಹಾಪ್ರಬಂಧಕರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ತಂತಿ ಸೇವೆಯನ್ನು ಹಳ್ಳಿಗಳಲ್ಲಿ ನೆಲೆಸಿರುವ ಜನತೆ, ರಕ್ಷಣಾ ಸೇವೆಯಲ್ಲಿರುವ ಯೋಧರು ಈಗಲೂ ಹೆಚ್ಚು ಉಪಯೋಗಿಸುತ್ತಿದ್ದಾರೆ. ಇಂಟರ್ನೆಟ್ ಸೌಲಭ್ಯ ಇಲ್ಲದ ಲಕ್ಷಾಂತರ ಹಳ್ಳಿ, ಪಟ್ಟಣಗಳಲ್ಲಿ ಇಂದಿಗೂ ಈ ಸೇವೆ ಚಾಲ್ತಿಯಲ್ಲಿದೆ. ತಂತಿ ಸೇವೆಯಿಂದ 130 ಕೋಟಿ ನಷ್ಟವಾಗುತ್ತಿದೆ ಎಂದು ಕೇಂದ್ರ ಹೇಳಿದೆ. ಈ ಹಿನ್ನೆಲೆ ಜು.15 ರಿಂದ ನಿಲ್ಲಿಸುವುದಾಗಿ ಬಿಎಸ್ಎನ್ಎಲ್ ಪ್ರಕಟಿಸಿರುವುದು ಸರಿಯಲ್ಲ ಎಂದು ಸಂಘ ಖಂಡಿಸಿದೆ.