ಪ್ರಜಾವೇದಿಕೆಗೆ ಆಯ್ಕೆ
ಹುಣಸೂರು: ಕರ್ನಾಟಕ ಪ್ರಜಾ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ಹುಣಸೂರಿನ ಪಾಂಡುಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜಾಧ್ಯಕ್ಷ ಆಲೂರು ನಾಗಪ್ಪ ತಿಳಿಸಿದ್ದಾರೆ.
ವಿಷ ಕುಡಿದು ಆತ್ಮಹತ್ಯೆ
ಪಿರಿಯಾಪಟ್ಟಣ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಕಣಿವೆ ಬಳಿಕೆಹಕ್ಕೆ ಗ್ರಾಮದ ಸೋಮಶೇಖರ್ (36) ಎಂಬವರು ಇಲ್ಲಿನ ವಸತಿಗೃಹವೊಂದರಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮಶೇಖರ್ ಜು. 9 ರಂದು ಕೊಠಡಿಯನ್ನು ಬಾಡಿಗೆಗೆ ಪಡೆದು ತಂಗಿದ್ದರು. ಜು.11 ರ ಗುರುವಾರ ಬೆಳಗ್ಗೆ ಕೊಠಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.