ಮೇಲುಸೇತುವೆ ಅಭಿವೃದ್ಧಿ
ಮೈಸೂರು- ಬೆಂಗಳೂರು ನಡುವೆ ಚತುಷ್ಪಥ ರಸ್ತೆಯ ನಂತರ ಸುಗಮ ಸಂಚಾರಕ್ಕೆ ಅನುಕೂಲವಾಗಿದೆಯಾದರೂ ಮಾರ್ಗ ಮಧ್ಯೆ ಬರುವ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ತೊಂದರೆಯಾಗುತ್ತಿದೆ.
ಇದರಿಂದ ಮೇಲುಸೇತುವೆ ನಿರ್ಮಾಣದ ಬಗ್ಗೆ ಬಜೆಟ್ನಲ್ಲಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದಾರೆ.ಬೀದರ್- ಚಾಮರಾಜನಗರ ನಡುವೆ 8 ಪಥ ನಿರ್ಮಿಸುವ ಪ್ರಸ್ತಾಪ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೇಷ್ಮೆ ಕೈಗಾರಿಕಾ ಸಂಸ್ಥೆ ಅಧುನೀಕರಣಕ್ಕೆ 5 ಕೋಟಿ ನೀಡಿದ್ದಾರೆ. ಮೈಸೂರಿನಲ್ಲಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಟ್ರಾಮಾ ಕೇಂದ್ರ ಆರಂಭವಾಗಲಿದೆ. ಪಾಲಿಕೆಗಳಲ್ಲಿ ಪೌರ ಕಾರ್ಮಿಕರ ಹೊರಗುತ್ತಿಗೆ ಪದ್ಧತಿ ಹಂತ, ಹಂತವಾಗಿ ರದ್ದಾಗಲಿದೆ. ಮೈಸೂರು ನಗರದಲ್ಲಿ ನರ್ಮ್ ಯೋಜನೆಯಡಿ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಪ್ರಕಟಿಸಲಾಗಿದೆ. ಮೈಸೂರನ್ನು ಸುರಕ್ಷಿತ ನಗರವಾಗಿ ಪರಿವರ್ತಿಸಲು ಪೊಲೀಸ್ ಇಲಾಖೆಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು. ನಗರದ ಪೊಲೀಸ್ ಠಾಣೆಗಳ ಉನ್ನತೀಕರಣ, ಸಿಎಆರ್ ಉನ್ನತೀಕರಣಕ್ಕೆ ನೆರವು ನೀಡಲಾಗುವುದು.
ರಂಗಾಯಣ, ಎಸ್ಐಆರ್ಡಿ ಘಟಕ ಆರಂಭ
ಮೈಸೂರು ರಂಗಾಯಣದ ಘಟಕಗಳು ಈಗ ಶಿವಮೊಗ್ಗ ಹಾಗೂ ಧಾರವಾಡದಲ್ಲಿ ಪ್ರತ್ಯೇಕವಾಗಿದ್ದು, ಗುಲ್ಬರ್ಗದಲ್ಲಿಯೂ ರಂಗಾಯಣ ಆರಂಭವಾಗಲಿದೆ. ಮೈಸೂರಿನಲ್ಲಿರುವ ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ಕೇಂದ್ರಗಲು ಧಾರವಾಡ, ಮಂಗಳೂರು ಹಾಗೂ ಗುಲ್ಬರ್ಗದಲ್ಲೂ ಆರಂಭವಾಗಲಿದೆ.
24 ಗಂಟೆ ನೀರು ಸರಬರಾಜು
ಮೈಸೂರು ಜಿಲ್ಲೆಯ ನಂಜನಗೂಡು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ 24 ಗಂಟೆ ಕುಡಿಯುವ ನೀರು ಪೂರೈಸುವ ಯೋಜನೆ ಆರಂಭಿಸಲಾಗುವುದು. ನಂಜನಗೂಡು ಹಿಂದಿನ ಸರ್ಕಾರದಲ್ಲಿ ಕನ್ನಡಗಂಗಾ ಯೋಜನೆಗೆ ಆಯ್ಕೆಯಾಗಿತ್ತು. ಅಲ್ಲಿ ಕೂಡ 24 ಗಂಟೆ ನೀರು ಪೂರೈಸುವ ಪ್ರಸ್ತಾಪ ಮಾಡಲಾಗಿತ್ತು. ಸುತ್ತೂರಿನಲ್ಲಿ ವಿಜ್ಞಾನ ಉದ್ಯಾನಕ್ಕೆ 5 ಕೋಟಿ ಸಿಗಲಿದೆ. ಇದು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮ. ಸಂಸದ ಆರ್. ಧ್ರುವನಾರಾಯಣ ಅವರ ಆಸಕ್ತಿಯಿಂದ ಮಂಜೂರಾಗಿದೆ. ಜಗದೀಶ್ ಶೆಟ್ಟರ್ ಅವರು ಸಿಎಂ ಆಗಿದ್ದಾಗ 1 ಕೋಟಿ ಬಿಡುಗಡೆಯಾಗಿತ್ತು.ಒಂದೇ ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿವೆ.
ಸರ್ಕಾರದ ಗುರಿಯೆ ಅರ್ಥವಾಗಿಲ್ಲ. ಬೆಳೆವಣಿಗೆ ಆಧಾರಿತ ಬಜೆಟ್ ಎನ್ನಲು ಬೆಳವಣೆಗೆ ಪ್ರೋತ್ಸಾಹಿಸುವ ಅಂಶ ಇಲ್ಲ. ಸಮಾಜ ಕಲ್ಯಾಣ ಯೋಜನೆಗಳನ್ನು ನೀಡಿದ್ದಾರೆ. ಬಜೆಟ್ ಸರ್ಕಾರದ ಗುರಿ ತೋರಿಸಬೇಕು. ಆದರೆ, ಚುನಾವಣಾಪೂರ್ವ ಬಜೆಟ್ನಂತೆ ಕಾಣಿಸುತ್ತಿದೆ. ಜೆನರಿಕ್ ಔಷಧ ಕೇಂದ್ರ ತೆರೆಯುವುದು ಮತ್ತು ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ನೀಡುವುದು, ಆಯುರ್ವೇದ ಆಸ್ಪತ್ರೆ ತೆರೆಯಲು ಮುಂದಾಗಿರುವುದು ಸ್ವಾಗತರ್ಹ. ಆದರೆ, ಹೆಣ್ಣುಮಕ್ಕಳು ಶಾಲೆಗೆ ಬಂದರೆ 1 ನೀಡುತ್ತೇವೆ ಎಂಬುದು ಅವೈಜ್ಞಾನಿಕ. ಹಣ ಕೊಟ್ಟರೆ ಶಾಲೆಗೆ ಬುರುತ್ತಾರೆ ಎಂದಾಗಲಿ ಅಥವಾ ಗುಣಮಟ್ಟದ ಶಿಕ್ಷಣ ದೊರಕುತ್ತದೆ ಎಂಬುದು ಸುಳ್ಳು.
- ಡಾ. ಆರ್. ಬಾಲಸುಬ್ರಹ್ಮಣ್ಯಂ, ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್