ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜಿಪಂ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ನಿರ್ಧಾರ

Mainashree
Updated On : 13 Jul 2013, 11:11 am

ಕ.ಪ್ರ.ವಾರ್ತೆ  ಟಿ.ನರಸೀಪುರ  ಜು. 13
ರಾಜಕೀಯ ಕ್ಷೇತ್ರದಲ್ಲಿನ ಹಗೆತನ ಹಾಗೂ ದ್ವೇಷ ಸಾಧನೆಗೆ ಬೇಸತ್ತು ಜಿಪಂ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಮೂಗೂರು ಜಿಪಂ ಕ್ಷೇತ್ರದ ಸದಸ್ಯೆ ಎಂ. ಸುಧಾ ಮಹದೇವಯ್ಯ ಹೇಳಿದ್ದಾರೆ.
ಜಿಪಂ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡುವ ನಿರ್ಧಾರ ಸ್ಟಷ್ಟಪಡಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇನೆ ಎಂಬ ತಪ್ಪು ಭಾವನೆಯಿಂದ ತಮ್ಮ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಪತಿಯವರನ್ನು ಟಾರ್ಗೆಟ್ ಮಾಡಿ, ವರ್ಗಾವಣೆ ಮಾಡಿರುವುದರಿಂದ ಮನಸ್ಸಿಗೆ ತೀವ್ರ ನೋವಾಗಿದೆ. ರಾಜಕೀಯಕ್ಕೆ ತಾವು ಸೂಕ್ತವಲ್ಲವೆಂದು ವ್ಯಥೆಪಟ್ಟುಕೊಂಡು ಜಿಪಂ ಸದಸ್ಯ ಸ್ಥಾನ ತ್ಯಜಿಸುತ್ತಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಚುನಾಯಿತ ಪ್ರತಿನಿಧಿಯಾಗಿ ತಾವೆಂದೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇನೆ ಎಂಬುದನ್ನು ಮನಸ್ಸಿನಲ್ಲಿಕೊಂಡು, ನೀರು, ನೆರಳಿಲ್ಲದ ಊರಿಗೆ ವರ್ಗಾವಣೆ ಮಾಡುತ್ತೇನೆ ಎಂದು ಗದರಿಸುವಂತೆ ಸರ್ಕಾರಿ ಸೇವೆಯಲ್ಲಿ ನಿಷ್ಠಾವಂತ ಅಧಿಕಾರಿಯಾಗಿರುವ ಮಹದೇವಯ್ಯ ಅವರನ್ನು ದೂರದೂರಿಗೆ ವರ್ಗಾವಣೆ ಮಾಡಿಸುವ ಮೂಲಕ ಸೇಡಿನ ರಾಜಕಾರಣ ಮಾಡಿದ್ದಕ್ಕೆ ಮನನೊಂದು ಮುಂದಿನ ಸೋಮವಾರ ರಾಜಿನಾಮೆ ನೀಡುತ್ತೇನೆ ಎಂದರು.
ಅಹಿಂದ ಸಮುದಾಯಗಳ ದಿಗ್ಗಜರಾದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಂದಲೆ ತಾವು, ಜಿಪಂ ಸದಸ್ಯರಾಗಿ ಜನಸೇವೆ ಮಾಡಲು ಅವಕಾಶ ಲಭ್ಯವಾಯಿತು ಎಂದು ಸುಧಾಮಹದೇವಯ್ಯ ಕೃತಜ್ಞತಾ ಭಾವನೆಯ ನುಡಿಗಳನ್ನಾಡಿದರು.
ಎರಡೂವರೆ ವರ್ಷಗಳ ಕಾಲ ಜಿಪಂ ಸದಸ್ಯರಾಗಿ ಸಾಧ್ಯವಾದಷ್ಟು ಅಭಿವೃದ್ಧಿಗೆ ದುಡಿದಿದ್ದೇನೆ. ಸಾಮಾನ್ಯ ಜನರ ಕಷ್ಟ- ಸುಖಗಳಿಗೆ ಸ್ಪಂದಿಸಿದ್ದೇನೆ. ತಾಲೂಕಿನ ಜಿಪಂ, ತಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಪತ್ರಕರ್ತರು ಕೂಡ ತಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ಸಹಕರಿಸಿದ್ದಾರೆ. ಮುಂದೆಂದೂ ರಾಜಕೀಯ ಕ್ಷೇತ್ರದತ್ತ ತಿರುಗಿಯೂ ನೋಡುವುದಿಲ್ಲ. ದೂರದೂರಿಗೆ ವರ್ಗಾವಣೆಗೊಂಡಿರುವ ಪತಿಯ ಜೊತೆಯಲ್ಲೆ ಮುಂದಿನ ದಿನ ಕಳೆಯುತ್ತೇನೆ. ಚುನಾಯಿತ ಅಧಿಕಾರವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಕ್ಕೆ, ಪಕ್ಷವಿರೋಧಿ ಚಟುವಟಿಕೆ ನಡೆಸಿದ ಭಾವನೆ ಇರುವವರಲ್ಲಿ ಕ್ಷಮೆ ಕೋರುತ್ತೇನೆ ಎಂದು ಕಣ್ಣೀರಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement