ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಸವ ತತ್ವದಿಂದ ದೂರವಾಗುತ್ತಿರುವ ವೀರಶೈವರು: ಮಹದೇವಪ್ರಸಾದ್

Mainashree
Updated On : 14 Jul 2013, 12:35 pm

ಮೈಸೂರು:  ಬಸವಣ್ಣನವರ ವಿಚಾರಧಾರೆಗಳಿಂದ ವೀರಶೈವ ಸಮುದಾಯ ದೂರ ಸರಿಯುತ್ತಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ವಿಷಾದಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬಸವ ಬಳಗಗಳ ಮತ್ತು ವೀರಶೈವ ಸಂಘ ಸಂಸ್ಥೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದಲ್ಲಿ ಆಯೋಜಿಸಿರುವ ಎರಡು ದಿನಗಳ ಬಸವ ಜಯಂತಿ ಶತಮಾನೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ವೀರಶೈವ ಸಮಾಜವು ಬಸವಣ್ಣನ ನಾಯಕತ್ವದಿಂದ ದೂರ ಸರಿಯುತ್ತಿರುವುದು ವಿಷಾದದ ಸಂಗತಿ. ಸಮುದಾಯದಲ್ಲಿ ಕಂದಾಚಾರ ಹಾಗೂ ಮೂಢನಂಬಿಕೆ ಹೆಚ್ಚಾಗುತ್ತಿರುವುದೆ ಇದಕ್ಕೆ ಕಾರಣ ಎಂದರು.
ಡಾ.ಮಾಣಿಕ್‌ರಾವ್ ಧನಶ್ರೀ ಅವರ ಕನ್ನಡದಲ್ಲಿ ಕಾಲಜ್ಞಾನ ಸಾಹಿತ್ಯ ಎಂಬ ಕೃತಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹಾಗೂ ಡಾ. ವೈ.ಸಿ. ಭಾನುಮತಿ ಅವರ ಬಸವೇಶ್ವರನ ಮಹತ್ವದ ಸಾಂಗತ್ಯ ಎಂಬ ಕೃತಿಯನ್ನು ಶಾಸಕ ಎಂ.ಕೆ. ಸೋಮಶೇಖರ್ ಲೋಕಾರ್ಪಣೆಗೊಳಿಸಿದರು. ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಅವರು ದಾರ್ಶನಿಕ ಬಸವಣ್ಣ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಅವಧೂತ ದತ್ತ ಪೀಠದ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  
ಶಾಸಕ ತನ್ವೀರ್‌ಸೇಠ್, ಜಿಪಂ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ, ಜಿಲ್ಲಾಧಿಕಾರಿ ಡಾ. ರಾಮೇಗೌಡ, ಎಂಡಿಎ ಆಯುಕ್ತ ಡಾ.ಸಿ.ಜಿ. ಬೆಟ್‌ಸೂರ್‌ಮಠ್, ನಗರ ಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಕೆ.ವಿ. ಮಲ್ಲೇಶ್,  ಸುನಿಲ್, ಪುಷ್ಪಲತಾ ಚಿಕ್ಕಣ್ಣ, ಮೈಮುಲ್ ಅಧ್ಯಕ್ಷ ಎನ್. ಮಹದೇವಪ್ಪ, ಮಹಾಸಭಾದ ಅಧ್ಯಕ್ಷ ಎಚ್.ವಿ. ಬಸವರಾಜು ಇದ್ದರು. ಒಕ್ಕೂಟದ ಅಧ್ಯಕ್ಷ ಸಿ. ಗುರುಸ್ವಾಮಿ ಸ್ವಾಗತಿಸಿದರು. ಪ್ರಾಂಶುಪಾಲ ಮೊರಬದ ಮಲ್ಲಿಕಾರ್ಜುನ ನಿರೂಪಿಸಿದರು. ಸುಮಂಗಲ ಜಂಗಮಶೆಟ್ಟಿ ವಚನ ಗಾಯನ ನಡೆಸಿಕೊಟ್ಟರು.
ಗೋಷ್ಠಿ: ನಂತರ ಕುದೇರುಮಠದ ಡಾ. ಶರತ್‌ಚಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆದ ಅನುಭವ ಮಂಟಪ ಚಿಂತನಗೋಷ್ಠಿಯಲ್ಲಿ ಶರಣರ ಧಾರ್ಮಿಕ, ಸಾಮಾಜಿಕ ಚಿಂತನೆ ಎಂಬ ವಿಷಯ ಕುರಿತು ಸಾಹಿತಿಗಳಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ. ಧರಣೀದೇವಿ ಮಾಲಗತ್ತಿ ಮಾತನಾಡಿದರು. ಧಾರವಾಡದ ಮೂರುಸಾವಿರ ಮಠದ ಕುಮಾರ ವೀರೂಪಾಕ್ಷ ಸ್ವಾಮೀಜಿ ಅವರು ವಿಶೇಷ ಉಪನ್ಯಾಸ ನೀಡಿದರು. ನಂತರ ವಚನಗಾಯನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement