ಶ್ರೀನಿವಾಸಪ್ರಸಾದ್ ಯಾವಾಗಲೋ ಮುಖ್ಯಮಂತ್ರಿಯಾಗಬೇಕಿತ್ತು: ವಿಶ್ವನಾಥ್
ಮೈಸೂರು: ಕಂದಾಯ ಸಚಿವರಾದ ವಿ. ಶ್ರೀನಿವಾಸಪ್ರಸಾದ್ ಅವರು ಮನಸ್ಸು ಮಾಡಿದ್ದರೆ ಯಾವಾಗಲೋ ಮುಖ್ಯಮಂತ್ರಿಯಾಗುತ್ತಿದ್ದರು ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆದ ಕ್ರೀಡಾಸಕ್ತ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, 1984 ರಲ್ಲಿಯೇ ಗಟ್ಟಿಯಾಗಿ ರಾಜಕೀಯ ನೆಲೆ ಕಂಡುಕೊಂಡಿದ್ದ ಶ್ರೀನಿವಾಸಪ್ರಸಾದ್ ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರಿಗೆ ಹೆಚ್ಚು ಚಿರಪರಿಚಿತರಾಗಿದ್ದರು. ಅವರೊಂದಿಗೆ ನಿರಂತರ ಒಡನಾಟ ಬೆಳೆಸಿಕೊಂಡಿದ್ದರೆ ಈಗ ಮಾಜಿ ಮುಖ್ಯಮಂತ್ರಿಯಾಗಿರುತ್ತಿದ್ದರು. ಆದರೆ, ಪ್ರಸಾದ್ ಮುಖ್ಯಮಂತ್ರಿಯಾಗಬೇಕು ಎಂಬ ಆಲೋಚನೆ ಬೆಳೆಸಿಕೊಳ್ಳಲೇ ಇಲ್ಲ ಎಂದರು.