ಸುದ್ದಿ ಸಂಕ್ಷೇಪ
ಎಸ್ಬಿಎಂ ಗ್ರಾಹಕರ ಪರದಾಟ
ಮೈಸೂರು: ನಗರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿವಿಧ ಶಾಖೆಗಳಲ್ಲಿ ಶನಿವಾರ ಬೆಳಗ್ಗೆ ಸರ್ವರ್ ಡೌನ್ ಆಗಿದ್ದರಿಂದ ಗ್ರಾಹಕರು ತೊಂದರೆ ಅನುಭವಿಸಿದರು. ಎಸ್ಬಿಎಂನ ಯಾವುದೇ ಶಾಖೆಗೆ ತೆರಳಿದರೂ ಸರ್ವರ್ ಡೌನ್ ಇದೆ. ಬೆಳಗ್ಗೆಯಿಂದಲೇ ಸರ್ವರ್ ಸರಿಯಿಲ್ಲ. ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೋಮವಾರ ಬರುವಂತೆ ಬ್ಯಾಂಕಿನ ಸಿಬ್ಬಂದಿಗೆ ಗ್ರಾಹಕರಿಗೆ ಹೇಳುತ್ತಿದ್ದದ್ದು ಸಾಮಾನ್ಯವಾಗಿತ್ತು.