ಸುದ್ದಿ ಸಂಕ್ಷೇಪ
20ಕ್ಕೆ ಉಪನ್ಯಾಸ
ಮೈಸೂರು: ಮೈಸೂರು ಸೈನ್ಸ್ ಫೌಂಡೇಷನ್ ವತಿಯಿಂದ ಜು. 20ರ ಸಂಜೆ 5.30ಕ್ಕೆ ರಂಗಾಯಣದ ಮನೆಯಂಗಳದಲ್ಲಿ ಒತ್ತಡ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಬಗ್ಗೆ ಆದಿಚುಂಚನಗಿರಿಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಸಮುದಾಯ ಔಷಧ ವಿಭಾಗದ ಸಹ ಪ್ರಾಧ್ಯಾಪಕ ಡಾ.ಬಿ.ಎಂ. ಶ್ರೀನಿವಾಸ ಉಪನ್ಯಾಸ ನೀಡುವರು.
ಅರ್ಜಿ ಆಹ್ವಾನ
ಮೈಸೂರು: ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ 60 ವರ್ಷದ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಯೋಶ್ರೇಷ್ಠರಿಗೆ 2013- 14ನೇ ಸಾಲಿಗೆ ರಾಜ್ಯ ಪ್ರಶಸ್ತಿ ನೀಡುವ ಬಗ್ಗೆ ಅರ್ಹ ಅಭ್ಯರ್ಥಿಗಳಿಂದ, ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗಾಗಿ 4191266, ಮೊ. 9141614633 ಸಂಪರ್ಕಿಸಬಹುದು.
ರಕ್ತದಾನ ಶಿಬಿರ
ಮೈಸೂರು: ಕೆಂಪಯ್ಯ ಐಪಿಎಸ್ ಅಭಿಮಾನಿಗಳ ವೇದಿಕೆಯಿಂದ ಆ. 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಕ್ರೀಡಾಕೂಟ ಹಾಗೂ ರಕ್ತದಾನ ಶಿಬಿರ ಏರ್ಪಡಿಸಿದೆ. ಜಿಲ್ಲೆಯ ಆಸಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕ್ರಿಕೆಟ್ ಮತ್ತು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಕ್ರೀಡಾ ತಂಡಗಳಿಗೋಸ್ಕರವಾಗಿ ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಜು. ಹೆಚ್ಚಿನ ಮಾಹಿತಿಗಾಗಿ ಮೊ. 9342421021 ಸಂಪರ್ಕಿಸಬಹುದು.
ಪ್ರತಿಭಾ ಪುರಸ್ಕಾರ
ಮೈಸೂರು: ಎನ್.ಆರ್. ಮೊಹಲ್ಲಾದ ಕ್ರೈಸ್ತರ ಪ್ರಗತಿಪರ ಸಂಸ್ಥೆಯು 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ತರಗತಿಯಲ್ಲಿ ಶೇ. 85 ಮೇಲ್ಪಟ್ಟ ಅಂಕ ಪಡೆದಿರುವ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಅಂಕ ಪಟ್ಟಿಯ ಜೆರಾಕ್ಸ್ ಪ್ರತಿಗಳನ್ನು ಜು. 30ರೊಳಗೆ ಸಂಸ್ಥೆಯ ಕಾರ್ಯದರ್ಶಿ ಫಾ. ಸ್ಟ್ಯಾಲೀನ್, (ಮೊ. 9945107170) ಅವರಿಗೆ ತಲುಪಿಸುವಂತೆ ಸಂಸ್ಥೆಯ ಫಾ.ರವಿಕುಮಾರ್ ತಿಳಿಸಿದ್ದಾರೆ.
ಕಾಲೇಜು ಉದ್ಘಾಟನೆ
ಮೈಸೂರು: ಗೋಕುಲಂ 3ನೇ ಹಂತದಲ್ಲಿರುವ ವಿದ್ಯಾವರ್ಧಕ ಸಂಘದ ಕೆ. ಪುಟ್ಟಸ್ವಾಮಿ ಪದವಿ ಕಾಲೇಜಿನ ಉದ್ಘಾಟನಾ ಸಮಾರಂಭವು ಜು. 15ರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಶಾಸಕ ವಾಸು ಉದ್ಘಾಟಿಸುವರು. ಸಂಸ್ಥೆಯ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸುವರು.
'ಅಂಗವಿಕಲರ ಹಕ್ಕುಗಳಲ್ಲಿ ಕೊರತೆ ಇದೆ'
ಕ.ಪ್ರ. ವಾರ್ತೆ, ಮೈಸೂರು, ಜು.11
ಅಂಗವಿಕಲ ಅಧಿನಿಯಮದಡಿ ನೀಡಿರುವ ಹಕ್ಕುಗಳು ಅಂಗವಿಕಲರಿಗೆ ಸಾಲದು ಎಂದು ಮೈಸೂರು ವಿವಿಯ ಡಾ. ಕೃಷ್ಣ ಹೊಂಬಾಳ್ ಹೇಳಿದರು.
ಜಗನ್ಮೋಹನ ಅರಮನೆಯಲ್ಲಿ ನಗರ ಪಾಲಿಕೆ ಗುರುವಾರ ಆಯೋಜಿಸಿದ್ದ ಅಂಗವಿಕಲರಿಗೆ ಕಾನೂನು ಅರಿವು ಶಿಬಿರದಲ್ಲಿ ಮಾತನಾಡಿದ ಅವರು, ಸಂವಿಧಾನದ ಅಂಗವಿಕಲ ಅಧಿನಿಯಮದಡಿ ನೀಡಿರುವ ಹಕ್ಕುಗಳು ಸಾಕೆನ್ನುವ ಅಲ್ಪತೃಪ್ತ ಮನಸ್ಸುಗಳ ನಡುವೆ ಇನ್ನೂ ಹೆಚ್ಚಿನ ಹಕ್ಕುಗಳು ಬೇಕು ಎನ್ನುವವರಿದ್ದಾರೆ ಎಂದರು.
ತಮ್ಮ ಮನೆಯಲ್ಲಾಗಲಿ ಅಥವಾ ತಾವಿರುವ ಯಾವುದೆ ಸ್ಥಳಗಳಲ್ಲಾಗಲಿ ತಮ್ಮ ಹಕ್ಕುಗಳು ಉಲ್ಲಂಘನೆ ಆಗದಂತೆ ಅಂಗವಿಕಲರು ನೋಡಿಕೊಳ್ಳಬೇಕು. ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ಭದ್ರತೆ ಇದ್ದು, ಐದು ವರ್ಷಕ್ಕೂ ಹೆಚ್ಚು ಕಾಲ ಉದ್ಯೋಗ ದೊರೆಯದೆ ಹೋದರೆ ಅವರಿಗೆ ಸರ್ಕಾರ ನಿರುದ್ಯೋಗ ಭತ್ಯೆ ನೀಡುತ್ತದೆ. ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಈ ಹಿನ್ನೆಲೆ ಹಕ್ಕುಗಳ ರಕ್ಷಣೆಗೆ ಬಹುವಿಧದ ಕಾರ್ಯತಂತ್ರ ಅವಶ್ಯವಿದೆ. ಸರ್ಕಾರದ ಸವಲತ್ತು ಪಡೆದುಕೊಳ್ಳಲು ಬೀದಿಗಿಳಿದು ಹೋರಾಟ ನಡೆಸುವ ಬದಲು ಆರ್‌ಟಿಐ, ಸಕಾಲದಂಹ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಬಲರಾಮು ಮಾತನಾಡಿದರು. ಪಾಲಿಕೆ ಉಪ ಆಯುಕ್ತ ಕಾಂತರಾಜು, ಚಂದ್ರಶೇಖರ್ ಇದ್ದರು.as