ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಕೊಡುತಾಯಿ ಜನ್ಮವನು' ಕಿರುಚಿತ್ರ ಮುಹೂರ್ತ

Mainashree
Updated On : 14 Jul 2013, 11:30 am

ಕ.ಪ್ರ.ವಾರ್ತೆ  ಮೈಸೂರು  ಜು. 14
ಸಿ.ಆರ್. ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಕೊಡುತಾಯಿ ಜನ್ಮವನು ಎಂಬ ಮೂರನೇ ಕಿರುಚಿತ್ರ ಮುಹೂರ್ತ ಭಾನುವಾರ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆರಂಭವಾಯಿತು.
ಶಾಸಕ ಎಂ. ಕೆ. ಸೋಮಶೇಖರ್ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಶುಭ ಕೋರಿದರು. ಗ್ರಾಪಂ ಅಧ್ಯಕ್ಷರಾದ ಎಂ. ನಾಗರಾಜು, ಎಂ.ಕೆ. ಗುರುರಾಜ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಸಿ. ರಾಕೇಶ್, ತಂದೆ- ತಾಯಿ ತಮ್ಮ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾರೆ. ಆದರೆ, ಅವರು ಚೆಲ್ಲಾಟದಿಂದ ಬದುಕು ಹಾಗೂ ಜೀವನವನ್ನು ಹೇಗೆ ನಾಶ ಮಾಡಿಕೊಳ್ಳುತ್ತಾರೆ ಎಂಬುದರ ಸುತ್ತ ಕಥೆ ಹೆಣೆಯಲಾಗಿರುವ ಕೊಡು ತಾಯಿ ಜನ್ಮವನು ಕಿರುಚಿತ್ರದ ಮೂಲಕ ನೀರು ಹಾಗೂ ಬೆಂಕಿಯೊಂದಿಗೆ ಹುಡುಗಾಟ ಆಡಬೇಡಿ ಎಂಬ ಸಂದೇಶವನ್ನೂ ಸಾರಲಾಗುವುದು. ಚಿತ್ರೀಕರಣವು ಮೈಸೂರಿನ ಸುತ್ತಮುತ್ತ ನಡೆಯಲಿದೆ ಎಂದರು.
ತಾರಾಗಣದಲ್ಲಿ ಇಂದುಮತಿ, ದಿನೇಶ್, ಉಮಾ ಸೋಮಶೇಖರ್, ಅಂಕಿತಕುಮಾರ್, ಎಸ್. ಅನಿಲ್, ಕೃಷ್ಣಮೂರ್ತಿ, ಬಿದಿರುಗೂಡು ಶ್ರೀನಿವಾಸ್, ಸ್ವೀಟ್ ಮಹದೇವ್, ಪ್ರತಾಪ್ ಅಭಿನಯಿಸುತ್ತಿದ್ದಾರೆ ಎಂದು ತಿಳಿಸಿದರು.
ಛಾಯಾಗ್ರಾಹಕರಾಗಿ ಅನಿಲ್‌ರಾಜ್, ವರ್ಣಾಲಂಕಾರ ಕಿರಣ್ ಗುಂಡ್ಲುಪೇಟೆ ಹಾಗೂ ಮಾರ್ಗದರ್ಶಕರಾಗಿ ಎಲೆಕ್ಟ್ರಿಕಲ್ ಶಂಕರ್ ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement