ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗಮನ ಸೆಳೆದ ಜಾವಾ ಬೈಕ್ ರ್ಯಾಲಿ

Mainashree
Updated On : 14 Jul 2013, 11:31 am

ಕ.ಪ್ರ.ವಾರ್ತೆ  ಮೈಸೂರು  ಜು. 14
ನಗರದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಜಾವಾ ದಿನಾಚರಣೆ ಅಂಗವಾಗಿ ಜಾವಾ ಬೈಕ್‌ಗಳ ರ್ಯಾಲಿ ನಡೆಯಿತು.
1947 ರಿಂದ 1996 ರವರೆಗಿನ ಮಾಡೆಲ್‌ನ ಬೈಕ್‌ಗಳು ಈ ರ್ಯಾಲಿಯಲ್ಲಿ ಭಾಗವಹಿಸಿದ್ದವು. ಜಾವಾ ಸಿಝಡ್ 175 ಸಿಸಿ, ಜಾವಾ ಸಿಟಿ ಸಿಲಿಂಡರ್ 350 ಸಿಸಿ, ಯೆಜ್‌ಡಿ 350, ಯೆಜ್‌ಡಿ ರೋಡ್‌ಕಿಂಗ್, ಆಯಿಲ್‌ಕಿಂಗ್, ಯೆಜ್‌ಡಿ ಬಿ ಟೈಪ್ ಮತ್ತು ಯೆಜ್‌ಡಿ ಕೋಲ್ಟ್ ಭಾಗವಹಿಸಿದ್ದವು.
ಅಬಕಾರಿ ಮತ್ತು ಲಾಟರಿ ನಿಷೇಧ ಜಾರಿ ವಿಭಾಗದ ಎಸ್ಪಿ ಬಸವರಾಜ ಮಾಲಗತ್ತಿ ಅವರು ಈ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ರ್ಯಾಲಿಯು ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಕುವೆಂಪುನಗರ, ಒಂಟಿಕೊಪ್ಪಲ್, ಕಾಳಿದಾಸ ರಸ್ತೆ, ಜಾವಾ ಕಾರ್ಖಾನೆ ಇದ್ದ ಸ್ಥಳ ಮತ್ತು ಬನ್ನಿಮಂಟಪದ ಬಾಲಭವನ ಬಳಿ ಅಂತ್ಯಗೊಂಡಿತು.
ಸಮೀರ್, ಮಂಜು, ಖೈಜರ್, ಹಮೀದ್, ಜಾವಾ ಕಾರ್ಖಾನೆಯ ನೌಕರರಾಗಿದ್ದ ಅನ್ವರ್, ಪ್ರಭಾಕರ್, ಶಂಕರ್, ಸಂಗಮ್, ಮಜೀದ್ ಇತರರು ಈ ರ್ಯಾಲಿಯ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement