ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಭಗವದ್ಗೀತೆಯಿಂದ ಸಂಸ್ಕೃತಿ ಹಿರಿಮೆ ಸಾಕಾರ

Mainashree
Updated On : 14 Jul 2013, 11:31 am

ಕ.ಪ್ರ.ವಾರ್ತೆ  ಮೈಸೂರು  ಜು. 14
ಮಕ್ಕಳು ಮತ್ತು ಪೋಷಕರು ಭಗವದ್ಗೀತೆಯ ಅರ್ಥ ಅರಿತುಕೊಂಡಾಗ ಮಾತ್ರ ಸಂಸ್ಕೃತಿಯ ಹಿರಿಮೆ ಸಾಕಾರಗೊಳಿಸಲು ಸಾಧ್ಯ ಎಂದು ರಾಮಕೃಷ್ಣಾಶ್ರಮದ ಸ್ವಾಮಿ ಪರಹಿತಾನಂದಜೀ ಹೇಳಿದರು.
ರಾಮಕೃಷ್ಣ ಸೇವಾ ಸಂಘದ ರಾಮಕೃಷ್ಣ ವಿದ್ಯಾಕೇಂದ್ರವು ಎಚ್.ಎನ್. ಕೃಷ್ಣರಾವ್ ಸ್ಮಾರಕ ನಗರ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅಂತರ ಶಾಲಾ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಅರ್ಜುನನಿಗೆ ಕುರುಕ್ಷೇತ್ರದಲ್ಲಿ ಶ್ರೀಕೃಷ್ಣನು ಬೋಧಿಸಿದ ನೀತಿಯೆ ಭಗವದ್ಗೀತೆಯಾಗಿದೆ. ಅದರ ಅರ್ಥವನ್ನು ಮಕ್ಕಳು ಮತ್ತು ಪೋಷಕರು ತಿಳಿದುಕೊಳ್ಳಬೇಕು. ಆಗ ಸಂಸ್ಕೃತಿಯ ಹಿರಿಮೆ ಸಾಕಾರಗೊಳಿಸಲು ಸಾಧ್ಯವಾಗುತ್ತದೆ ಎಂದರು.
ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ. ಪಾಪೇಗೌಡ, ಉಪಾಧ್ಯಕ್ಷ ಎಚ್.ಕೆ. ಅಶೋಕ್‌ಕುಮಾರ್, ಶಾಲಾ ಸಮಿತಿ ಅಧ್ಯಕ್ಷ ಡಾ. ಜೆ.ವಿ. ನಾರಾಯಣ ಇದ್ದರು.
ಈ ಸ್ಪರ್ಧೆಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಾಮಕೃಷ್ಣ ವಿದ್ಯಾಶಾಲೆಯ ಸುಮೇಧಾ ಭಟ್ ಪ್ರಥಮ, ಜ್ಞಾನಗಂಗಾ ವಿದ್ಯಾಪೀಠದ ಜಿ. ಅಕ್ಷಯ ದ್ವಿತೀಯ ಮತ್ತು ಯು. ಶಮಂತ್ ತೃತೀಯ ಬಹುಮಾನ ಪಡೆದರು.
ಪ್ರೌಢಶಾಲಾ ವಿಭಾಗದಲ್ಲಿ ಸಿಎಫ್‌ಟಿಆರ್‌ಐ ಶಾಲೆಯ ಪ್ರಜ್ವಲ್ ಭಾರದ್ವಾಜ್ ಪ್ರಥಮ, ಎನ್.ಡಿ. ಸೌಮ್ಯ ದ್ವಿತೀಯ ಮತ್ತು ರಾಮಕೃಷ್ಣ ವಿದ್ಯಾಕೇಂದ್ರದ ಎನ್. ವೈಷ್ಣವಿ ತೃತೀಯ ಬಹುಮಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement