ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

22 ರಿಂದ ಕ್ಲೌಡ್ ಕಂಪ್ಯೂಟಿಂಗ್

Rashmi Kasaragodu
Updated On : 16 Jul 2013, 1:13 am

ಮೈಸೂರು: ಎನ್‌ಐಇ ಕಾಲೇಜು ಜು.22 ರಿಂದ 26 ರವರೆಗೆ ತಾಂತ್ರಿಕ ಶಿಕ್ಷಣ ಗುಣಮಟ್ಟ ಹೆಚ್ಚಳ ಕಾರ್ಯಕ್ರಮವನ್ನು ಕ್ಲೌಡ್ ಕಂಪ್ಯೂಟಿಂಗ್ ಹೆಸರಿನಲ್ಲಿ ಆಯೋಜಿಸಿದೆ. ಕಂಪ್ಯೂಟರ್‌ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಇನ್‌ಫಾರ್ಮೇಷನ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಎಂಜಿನಿಯರಿಂಗ್ ಮತ್ತು ಅಪ್ಲಿಕೇಷನ್‌ನ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಆಯೋಜಿಸಿದ್ದು, ಭಾಗವಹಿಸುವವರು ಜು.18ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಕಾರ್ಯಕ್ರಮವು ಎನ್‌ಐಇ ಸುವರ್ಣ ಮಹೋತ್ಸವ ಕಟ್ಟಡದಲ್ಲಿ ನಡೆಯಲಿದ್ದು, ಕೈಗಾರಿಕೋದ್ಯಮಿಗಳು 5 ಸಾವಿರ, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು 2 ಸಾವಿರ ಮತ್ತು ಸಂಶೋಧನ ವಿದ್ಯಾರ್ಥಿಗಳು 500 ಶುಲ್ಕ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಚಂದನದಲ್ಲಿ ಇಂದು ಮಾಲಿನಿ ಉಪನ್ಯಾಸ
ಮೈಸೂರು: ದೂರದರ್ಶನ ಚಂದನ ವಾಹಿನಿಯ ಆರೋಗ್ಯ ಭಾರತ ಕಾರ್ಯಕ್ರಮದಲ್ಲಿ ಜು.16 ರಂದು ಸಂಜೆ 7.30ಕ್ಕೆ ಹಾಗೂ 17 ರಂದು ಬೆಳಗ್ಗೆ 9.30ಕ್ಕೆ ಮೈಸೂರು ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುತ್ತೂರು ಎಸ್. ಮಾಲಿನಿ ಅವರಿಂದ ಕಾರ್ಯ ವರ್ಣತಂತುಗಳ ವ್ಯತ್ಯಯದ ಕಾಯಿಲೆಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ನಾಳೆ ಪ್ರತಿಭಾ ಪ್ರಶಸ್ತಿ ಪ್ರದಾನ
ಮೈಸೂರು: ಕರ್ನಾಟಕ ಮುಕ್ತ ಸಾಹಿತ್ಯ ಅಕಾಡೆಮಿ ಹಾಗೂ ವೆಂಕಟಗಿರಿ ಪ್ರಕಾಶನವು ವಿಜ್ಞಾನ ಸಂಪದ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜು.17 ರಂದು ಹಮ್ಮಿಕೊಂಡಿದೆ. ಮಧ್ಯಾಹ್ನ 2.30ಕ್ಕೆ ಮಾನಂದವಾಡಿ ರಸ್ತೆಯಲ್ಲಿನ ರೇಲ್ವೆ ಕಾರ್ಯಾಗಾರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮುಕ್ತಕ ಅಕಾಡೆಮಿಯ ಅಧ್ಯಕ್ಷ ಎಸ್. ರಾಮಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೆಸ್ ಸಿಟಿ ಕಾರ್ಯದರ್ಶಿ ಡಾ.ಪಿ.ರಂಗಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು. ಸಂಸ್ಕೃತಿ ಪೋಷಕ ಕೆ.ರಘುರಾಂ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನೀ. ಗಿರಿಗೌಡ ದಿಕ್ಸೂಚಿ ಭಾಷಣ ಮಾಡುವರು. ಶಾಲೆಯ ಮುಖ್ಯ ಶಿಕ್ಷಕಿ ಎಸ್. ಪದ್ಮಾಂಬ ಹಾಗೂ ಸಾಹಿತಿ ಕೆಂಪಾಚಾರ್ ಕುಪ್ಯಾ ಅತಿಯಾಗಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement