ಕೊಚ್ಚಿ ಹೋದ ಬೆಳೆ
ಸುತ್ತೂರು: ಕಪಿಲಾ ನದಿಯ ಪ್ರವಾಹದಿಂದಾಗಿ ನಂಜನಗೂಡು ತಾಲೂಕಿನ ಸುತ್ತೂರು, ಜೀಮಾರಳ್ಳಿ, ಬಿಳುಗಲಿ ಮುಂತಾದ ಗ್ರಾಮಗಳಲ್ಲಿ ಬೆಳೆದ ರಾಗಿ, ದ್ವಿದಳ ದಾನ್ಯ ಬೆಳೆಗಳು ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಅಧಿಕಾರಿಗಳು ಕೂಡಲೆ ರೈತರಿಗೆ ಪರಿಹಾರ ನೀಡಬೇಕೆಂದು ರೈತ ಸಂಘದ ಅಧ್ಯಕ್ಷ ಗುರುಲಿಂಗೇಗೌಡ, ಜಗದೀಶ, ಕುಮಾರ್ ಒತ್ತಾಯಿಸಿದ್ದಾರೆ.