ನಗರ್ಲೆ: ರಸ್ತೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ
ಕ.ಪ್ರ.ವಾರ್ತೆ ಸುತ್ತೂರು ಜು. 15
ನಂಜನಗೂಡು ತಾಲೂಕು ನಗರ್ಲೆ ಗ್ರಾಮದಲ್ಲಿ ನೀರಾವರಿ ಇಲಾಖೆಯಿಂದ ಪ.ಪಂಗಡದ ಅನುದಾನದಲ್ಲಿ ಮಂಜೂರಾಗಿರುವ ರಸ್ತೆಗಳ ಕಾಮಗಾರಿಗೆ ತಾಪಂ ಸದಸ್ಯ ಹೆಜ್ಜಿಗೆ ಗೋವಿಂದರಾಜು ಗುದ್ದಲಿಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷೆ ಸರಸ್ವತಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಧರ್ಮೇಂದ್ರ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಗ್ರಾಮದ ಕಾಂಗ್ರೆಸ್ ಮುಖಂಡ ನಗರ್ಲೆ ಕೃಷ್ಣಪ್ಪ, ಆರ್. ಸರ್ವೇಶ್, ಎಸ್ಸಿ ಘಟಕದ ಅಧ್ಯಕ್ಷ ಸುರೇಶ್ ಬಾಬು, ಲಿಂಗಣ್ಣ ಜಿ.ಮರಳ್ಳಿ ಗುರುಸ್ವಾಮಿ, ಸೋನಹಳ್ಳಿ ದೊರೆಸ್ವಾಮಿ, ನಗರ್ಲೆ ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಕೆಂಪಣ್ಣ, ತಾಪಂ ಮಾಜಿ ಸದಸ್ಯ ನಾಗಮ್ಮ ನಾರಾಯಣ, ಶಿವಣ್ಣ, ಪುಟ್ಟಲಿಂಗನಾಯ್ಕ, ಶ್ರೀನಿವಾಸ್ ಕೃಷ್ಣ, ರಾಜಪ್ಪ, ಸಿ.ಆರ್. ಮಹದೇವು, ಗ್ರಾಮದ ಇದ್ದರು.