ನಾಳೆ ವಿಶೇಷ ಸ್ವಾತಿ ಪೂಜೆ
ಮೈಸೂರು: ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜು.17ರ ಸ್ವಾತಿ ನಕ್ಷತ್ರದ ಪ್ರಯುಕ್ತ ವಿಶೇಷ ಸ್ವಾತಿ ಪೂಜೆ ಏರ್ಪಡಿಸಿದೆ. ಅಂದು ಬೆಳಗ್ಗೆ 6.15ಕ್ಕೆ ಮಹಾಸುದರ್ಶನ ಹೋಮ ಮತ್ತು ಪೂರ್ಣಾಹುತಿ, ಬೆಳಗ್ಗೆ 8.30ಕ್ಕೆ ವಿಶೇಷ ಮಹಾಭಿಷೇಕ ಮತ್ತು ಪುಷ್ಪಾಲಂಕಾರ ಸೇವೆ, ಮಧ್ಯಾಹ್ನ ಒಂದಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ರಾತ್ರಿ 7.30 ಕ್ಕೆ ಪ್ರಾಕಾರೋತ್ಸವ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಸಿ.ವಿ. ಶ್ರೀನಿವಾಸರಾವ್ ತಿಳಿಸಿದ್ದಾರೆ.
ಸಂಪ್ರದಾಯ ಗೀತೆ ತರಗತಿ
ಮೈಸೂರು: ಕುವೆಂಪುನಗರದ ಮೈಸೂರು ಸಂಗೀತ ಪ್ರತಿಷ್ಠಾನ ವತಿಯಿಂದ ಸಂಪ್ರದಾಯ ಗೀತೆಗಳ ತರಗತಿ ನಡೆಸಲಾಗುತ್ತದೆ. ತರಗತಿಯಲ್ಲಿ ಡಾ.ಮನೋನ್ಮಣಿ ಅವರು ಮದುವೆ, ಮುಂಜಿ, ಸೀಮಂತ ಇತ್ಯಾದಿ ಸಮಾರಂಭಗಳಲ್ಲಿ ಹಿಂದಿನವರು ಹಾಡುತ್ತಿದ್ದ ಸಂಪ್ರದಾಯ ಗೀತೆಗಳು ಹಾಗೂ ದೇವರನಾಮಗಳನ್ನು ಕಲಿಸಿಕೊಡುವರು. ಆಸಕ್ತರು ಮೊ. 91411196511 ಸಂಪರ್ಕಿಸಬಹುದು.
ಸಂಗೀತ ಕಾರ್ಯಕ್ರಮ
ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠವು, ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜು.19ರ ಸಂಜೆ 6ಕ್ಕೆ ವಿದುಷಿ ಎಂ.ಎಸ್. ಶೀಲಾ ಅವರ ಗಾಯನ ಕಾರ್ಯಕ್ರಮ ಏರ್ಪಡಿಸಿದೆ. ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಶ್ರೀ ಮಹಾವಿದ್ಯಾಗಣಪತಿ ದೇವಸ್ಥಾನಕ್ಕೆ 25 ವರ್ಷ ತುಂಬಿದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.