ನೇರ ವರ್ಗಾವಣೆ ಸಹಾಯಧನ: ನಾಳೆ ಆಂದೋಲನ
ಕ.ಪ್ರ.ವಾರ್ತೆ ಮೈಸೂರು ಜು. 15
ಆಧಾರ್ ನಂಬರ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕ ಮಾಡದ ಅನಿಲ ಗ್ರಾಹಕರಿಗಾಗಿ, ಜಿಲ್ಲಾ ಬ್ಯಾಂಕರ್ಸ್ ಫೋರಂನಿಂದ ನಗರದ ವಿವಿಧ ಬ್ಯಾಂಕ್ ಶಾಖೆಗಳಲ್ಲಿ ಜು.17ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿಶೇಷ ಆಂದೋಲನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎನ್. ಶಿವಲಿಂಗಯ್ಯ ಹೇಳಿದ್ದಾರೆ.
ಜಿಲ್ಲೆಯಲ್ಲಿ ಆಧಾರ್ ನಂಬರ್ ಅನ್ನು ಬ್ಯಾಂಕ್‌ಗಳ ಖಾತೆಗಳೊಂದಿಗೆ ಸಂಪರ್ಕ ಕಲ್ಪಿಸಿದ ಎಲ್‌ಪಿಜಿ ಗ್ರಾಹಕರಿಗೆ ನೇರವಾಗಿ ಎಲ್‌ಪಿಜಿ ಸಹಾಯಧನ ವರ್ಗಾಯಿಸುವ ಪ್ರಕ್ರಿಯೆ ಜು.1 ರಿಂದ ಪ್ರಾರಂಭವಾಗಿದೆ. ಬ್ಯಾಂಕ್ ಖಾತೆ ಹೊಂದಿರದ ಎಲ್‌ಪಿಜಿ ಗ್ರಾಹಕರು ಕೂಡಲೇ ಸಮೀಪದ ಬ್ಯಾಂಕ್ ಶಾಖೆ ಸಂಪರ್ಕಿಸಿ ಬ್ಯಾಂಕ್ ಖಾತೆ ತೆರೆಯಬೇಕೆಂದು ಅವರು ಕೋರಿದ್ದಾರೆ.
17 ರಂದು ಆಂದೋಲನ ಶಿಬಿರ ನಡೆಯುವ ಬ್ಯಾಂಕ್‌ಗಳ ಹೆಸರು ಮತ್ತು ವಿಳಾಸ ವಿವರ ಇಂತಿದೆ- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- ವಲಯ ಕಚೇರಿ, ಟಿ.ಕೆ. ಲೇಔಟ್, ಕೃಷ್ಣಮೂರ್ತಿಪುರಂ ಶಾಖೆ ಮತ್ತು ವಿಜಯನಗರ 3ನೇ ಹಂತ ಶಾಖೆ. ಕೆನರಾಬ್ಯಾಂಕ್- ನಜರಬಾದ್ ಮತ್ತು ಸಿದ್ದಾರ್ಥನಗರ ಶಾಖೆಗಳು. ಕಾವೇರಿ ಗ್ರಾಮೀಣ ಬ್ಯಾಂಕ್- ಜೆ.ಪಿ. ನಗರ ಮತ್ತು ದಟ್ಟಗಳ್ಳಿ (ವಿವೇಕಾನಂದನಗರ) ಶಾಖೆಗಳು. ಸಿಂಡಿಕೇಟ್ ಬ್ಯಾಂಕ್- ಚಾಮುಂಡಿಪುರಂ ಮತ್ತು ಸರಸ್ವತಿಪುರಂ ಶಾಖೆಗಳು. ವಿಜಯ ಬ್ಯಾಂಕ್- ವಿಜಯನಗರ ಮತ್ತು ಬೋಗಾದಿ ಶಾಖೆಗಳು. ಕಾರ್ಪೊರೇಷನ್ ಬ್ಯಾಂಕ್- ನಿವೇದಿತಾ ನಗರ ಮತ್ತು ಸರಸ್ವತಿಪುರಂ ಶಾಖೆಗಳು. ಇಂಡಿಯನ್ ಓವರ್‌ಸೀಸ್ ಬ್ಯಾಂಕ್-ಯಾದವಗಿರಿ ಶಾಖೆ.