ಮಾಧ್ಯಮಕ್ಕೆ ಜನಾಂದೋಲನ ಸೃಷ್ಟಿಸುವ ಶಕ್ತಿ
ಕಿತ್ತೂರು: ಮಾಧ್ಯಮಕ್ಕೆ ಜನಾಂದೋಲನ ಸೃಷ್ಟಿ ಮಾಡುವ ಶಕ್ತಿ ಇದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್ ಹೇಳಿದರು.
ಸಮೀಪದ ಹಂಡಿತವಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರೋಟರಿ ಪಿರಿಯಾಪಟ್ಟಣ ಮಿಡ್‌ಟೌನ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಾಧ್ಯಮ ಸಮಾಜವನ್ನು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸರಿದಾರಿಗೆ ತರುವ ಅತ್ಯಂತ ವಿಶೇಷ ಅನಿವಾರ್ಯತೆಯಿಂದ ಕೆಲಸ ಮಾಡುತ್ತಿದೆ ಎಂದರು. ರೋಟರಿ ಮಿಡ್‌ಟೌನ್ ಅಧ್ಯಕ್ಷ ಪಿ.ಎಸ್. ಹರೀಶ್ ಮಾತನಾಡಿ, ಒಂದರಿಂದ ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ರೋಟರಿ ವತಿಯಿಂದ ವಿಮಾ ಸೌಲಭ್ಯವನ್ನು ಕೇವಲ 7 ಪಾವತಿಸಿದರೆ ಉಳಿದ ಹಣವನ್ನು ರೋಟರಿ ಮಿಡ್‌ಟೌನ್ ಭರಿಸಿ ಅವರ 18ನೇ ವಯಸ್ಸಿನವರೆಗೆ ಈ ವಿಮೆ ಮಾಡಲಾಗುವುದು ಎಂದು ತಿಳಿಸಿದರು. ಶಾಲಾ ಮಕ್ಕಳಿಗೆ ರಸಪ್ರಶ್ನೆ ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ತಾಲೂಕು ಕರವೇ ಅಧ್ಯಕ್ಷ ಎನ್.ಎಲ್. ಗಿರೀಶ್, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ್, ಉಪಾಧ್ಯಕ್ಷ ಸ್ವಾಮಿ, ರೋಟರಿ ಮಿಡ್ ಟೌನ್ ಕಾರ್ಯದರ್ಶಿ ಬಿ.ಎಸ್.ಪಿ. ರಾವ್, ಮುಖ್ಯ ಶಿಕ್ಷಕಿ ಶಶಿಕಲಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಂಪಲಾಪುರ ಮೋಹನ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಪ್ರಕಾಶ್ ಕಂಪಲಾಪುರ, ಪದಾಧಿಕಾರಿಗಳಾದ ಕೆ. ಶಿವಣ್ಣ, ಬಿ.ಜೆ. ಅರ್ಜುನ್, ಕೆ.ಟಿ. ಶ್ರೀನಿವಾಸ್, ಎಂ.ಎ. ರಾಮೇಗೌಡ, ಶಿವದೇವ್, ಅರುಣ ಹಿಂದೂಸ್ಥಾನ್, ಎಚ್.ಕೆ. ಮಹೇಶ್, ಕಲಾವಿದ ಕುಮಾರ್ ಅರಸೇಗೌಡ, ಮುಖಂಡರಾದ ಕೆ.ಎಸ್. ಕೃಷ್ಣೇಗೌಡ, ಸೈಯದ್ ಫಯಾಜ್ ಇದ್ದರು.