ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮುಖ್ಯಮಂತ್ರಿಗೆ ವಿಶ್ವಕರ್ಮ ಸಮುದಾಯ ಅಭಿನಂದನೆ

Rashmi Kasaragodu
Updated On : 16 Jul 2013, 1:19 am

ಕ.ಪ್ರ.ವಾರ್ತೆ   ಮೈಸೂರು   ಜು. 15
ಪ್ರಪ್ರಥಮ ಬಾರಿಗೆ ವಿಶ್ವಕರ್ಮ ಸಮುದಾಯದವರ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್‌ನಲ್ಲಿ 5 ಕೋಟಿ ಮೀಸಲಿಟ್ಟಿರುವ ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶ್ರೀ ವಿಶ್ವಕರ್ಮ ವಿದ್ಯಾವರ್ಧಕ ಸಂಘ ಅಭಿನಂದಿಸಿದೆ.
ವಿಶ್ವಕರ್ಮ ಸಮುದಾಯವು ಕರ್ನಾಟಕದಾದ್ಯಂತ ಸುಮಾರು 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಗುರುತಿಸಲ್ಪಟ್ಟ ಸಮಾಜವಾಗಿದ್ದರೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ರಾಜ್ಯದ ಪ್ರಮುಖ ಪಕ್ಷವಾದ ಕಾಂಗ್ರೆಸ್ ವಿಶ್ವಕರ್ಮ ಸಮಾಜವನ್ನು ರಾಜಕೀಯವಾಗಿ ಗುರುತಿಸಿಲ್ಲ. ಅಂತವರನ್ನು ಗುರುತಿಸಿ ರಾಜಕೀಯ ಸ್ಥಾನಮಾನ ನೀಡುವಂತೆ ಪದಾಧಿಕಾರಿಗಳಾದ ಟಿ. ನಾಗರಾಜು, ಬಿ. ನರಸಿಂಹಮೂರ್ತಿ, ಎಂ.ಜಿ. ದೇವರಾಜು, ಕೆ.ಸೋಮಶೇಖರ್, ಚಂದ್ರು, ಬಂಗಾರಸ್ವಾಮಿ, ಶ್ರೀಕಂಠಮೂರ್ತಿ, ಎಚ್.ಆರ್. ರಂಗಪ್ಪ ಒತ್ತಾಯಿಸಿದ್ದಾರೆ.
ಹಕ್ಕೋತ್ತಾಯಗಳು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಿಂದ ತೆರವಾಗಿರುವ ಎಂಎಲ್‌ಸಿ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕು. ರಾಜ್ಯಾದ್ಯಂತ ವಿಶ್ವಕರ್ಮ ನಿಗಮದ ಶಾಖೆ ತೆರೆಯಬೇಕು. ನಿಗಮ, ಮಂಡಳಿ ನೇಮಕಾತಿಯಲ್ಲಿ ವಿಶ್ವಕರ್ಮರಿಗೆ ಹೆಚ್ಚಿನ ಸ್ಥಾನ ನೀಡಬೇಕು. ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಬೇಕು. ಸೆ.17 ರ ವಿಶ್ವಕರ್ಮ ಜಯಂತಿಯಂದು ರಜೆ ಘೋಷಿಸುವಂತೆ ಕೋರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement