ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವಚ್ಛತೆ ಕಾಪಾಡಲು ತಾಪಂ ಇಓ ಮನವಿ

Rashmi Kasaragodu
Updated On : 16 Jul 2013, 1:14 am

ಕ.ಪ್ರ.ವಾರ್ತೆ   ಟಿ.ನರಸೀಪುರ   ಜು. 15
ಪ್ರತಿಯೊಬ್ಬರು ನೀರಿನಲ್ಲಿ ಶುದ್ಧತೆ ಹಾಗೂ ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ವೆಂಕಟೇಶ್ ಹೇಳಿದರು.
ಇಲ್ಲಿನ ಬಾಬು ಜಗಜೀವನ್‌ರಾಂ ಸಮುದಾಯ ಭವನದಲ್ಲಿ ಸೋಮವಾರ ತುಮಕೂರಿನ ನವ್ಯದಿಶ ಟ್ರಸ್ಟ್ ಹಾಗೂ ಬೆಂಗಳೂರಿನ ಗ್ರಾಮೀಣ ಕೂಟದ ವತಿಯಿಂದ ನೀರು ಮತ್ತು ನೈರ್ಮಲ್ಯ ಕುರಿತು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನೀರು ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ವಹಿಸಿದ್ದರಿಂದ ಕುಡಿಯುವ ನೀರು ಮತ್ತು ಸೇವಿಸುವ ಗಾಳಿ ಕಲುಷಿತಗೊಳ್ಳುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಆರ್. ರಾಜಣ್ಣ ಮಾತನಾಡಿದರು. ಗ್ರಾಮೀಣ ಕೂಟದ ಪ್ರಾದೇಶಿಕ ಪ್ರಬಂಧಕ ಎಂ.ಎಸ್. ಶಿವಕುಮಾರ್, ನವ್ಯದಿಶ ಟ್ರಸ್ಟ್ ಭಾಗ್ಯಲಕ್ಷ್ಮೀ, ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ವಿ.ಪಿ. ಶಿವಕುಮಾರ್, ಯಂಜೇರಪ್ಪ, ಮಹಿಳಾ ಸಂಘಗಳ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement