ಜಯಚಾಮರಾಜ ಒಡೆಯರ್ ಜಯಂತಿ
ಕೆ.ಆರ್. ಮೊಹಲ್ಲಾದ ಮೈಸೂರು ನಗರ ಸಾರ್ವಜನಿಕ ಹಿತರಕ್ಷಣಾ ಕೇಂದ್ರ ಸಮಿತಿಯಿಂದ ಜು. 18ರ ಬೆಳಗ್ಗೆ 11ಕ್ಕೆ ಅರಮನೆ ಆವರಣದಲ್ಲಿ ಜಯಚಾಮರಾಜ ಒಡೆಯರ್ ಅವರ ಜನ್ಮದಿನಾಚರಣೆ ಸಮಾರಂಭ ಏರ್ಪಡಿಸಿದೆ. ಮಂಟೇಸ್ವಾಮಿ ಮಠದ ಆಡಳಿತಾಧಿಕಾರಿ ಬಿ.ಎಲ್. ಪ್ರಭುದೇವರಾಜೇ ಅರಸ್ ಅಧ್ಯಕ್ಷತೆ ವಹಿಸುವರು.
ಮಾಂಡೋಲಿನ್ ವಾದನ
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸುಬ್ಬರಾಯನಕೆರೆ ರಾಘವೇಂದ್ರಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ ಜು. 18ರ ಸಂಜೆ 7.30ಕ್ಕೆ ವಿದ್ವಾನ್ ಜಾನಕೀರಾಮ್ ಅವರಿಂದ ಮಾಂಡೋಲಿನ್ ವಾದನ ಕಾರ್ಯಕ್ರಮ ಏರ್ಪಡಿಸಿದೆ.
ಪರೀಕ್ಷೆಗೆ ತರಬೇತಿ
ರಾಷ್ಟ್ರೀಕೃತ ಬ್ಯಾಂಕುಗಳ ಕ್ಲರಿಕಲ್ ಮತ್ತು ಪ್ರೊಬೆಷನರಿ ಆಫೀಸರ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ನೇತಾಜಿ ಎಜುಕೇಷನ್ ಫೌಂಡೇಷನ್ ವತಿಯಿಂದ ತರಬೇತಿ ಶಿಬಿರ ಪ್ರಾರಂಭಿಸಲಿದೆ. ಆಸಕ್ತರು ಜು. 20ರೊಳಗೆ ತಮ್ಮ ಹೆಸರನ್ನು ಸಂಜೆ 5.30 ರಿಂದ ರಾತ್ರಿ 8.30 ರವರೆಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9980639953 ಸಂಪರ್ಕಿಸಬಹುದು.
ಸಂಗೀತ ಕಾರ್ಯಕ್ರಮ
ಶ್ರೀ ಕೃಷ್ಣಗಾನ ಸಭಾ ವತಿಯಿಂದ ಜು. 20ರ ಸಂಜೆ 6ಕ್ಕೆ ಗೋಕುಲಂನ ಶ್ರೀಕೃಷ್ಣ ದೇವಸ್ಥಾನದ ಆವರಣದ ಆಳ್ವಾರ್ ಕಲಾಭವನದಲ್ಲಿ ವಿದುಷಿ ಕಲಾವತಿ ಅವಧೂತ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ನೇಮಕ
ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಆ್ಯಂಡ್ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಜಿ.ಎಸ್. ಬಾಬು ಅವರನ್ನು ಸಂಘದ ಪತ್ರಿಕಾ ಸಂಪರ್ಕಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಚದುರಂಗ ಪಂದ್ಯಾವಳಿ
ಮೈಸೂರು: ಮೈಸೂರು ಜಿಲ್ಲಾ ಚದುರಂಗ ಸಂಸ್ಥೆ ಮತ್ತು ಯುನೈಟೆಡ್ ಕರ್ನಾಟಕ ಚದುರಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕುವೆಂಪುನಗರದ ಕಾವೇರಿ ಸಂಸ್ಥೆಯ ಸಭಾಂಗಣದಲ್ಲಿ ಜು. 19 ರಿಂದ 21ರವರೆಗೆ 15 ವರ್ಷ ವಯೋವುತಿ ಬಾಲಕರ ರಾಜ್ಯಮಟ್ಟದ ಹಾಗೂ ಜು. 22 ರಿಂದ 23 ರವರೆಗೆ 15 ವರ್ಷ ವಯೋವುತಿ ಬಾಲಕಿಯರ ಚದುರಂಗ ಪಂದ್ಯಾವಳಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಎಂ. ನಾಗೇಂದ್ರ, ಮೊ. 8123819220 ಸಂಪರ್ಕಿಸಬಹುದು.