ನೇತ್ರ ತಪಾಸಣಾ ಶಿಬಿರ
ಕ.ಪ್ರ.ವಾರ್ತೆ ಹುಣಸೂರು ಜು. 15
ಮೈಸೂರಿನ ಮಹಾವೀರ್ ಜೈನ್ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಕಣ್ಣಿನ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 60 ಮಂದಿ ಕಣ್ಣಿನ ತೊಂದರೆ ಹೊಂದಿದ್ದವರು, ಸ್ಕ್ರೀನಿಂಗ್ ಪರೀಕ್ಷೆಗೆ ಒಳಗಾದರು. ಇವರಲ್ಲಿ 12 ಮಂದಿಗೆ ಕಣ್ಣಿನಪೊರೆ ಶಸ್ತ್ರ ಚಿಕಿತ್ಸೆ ಅವಶ್ಯವಿರುವುದನ್ನು ಮನಗಂಡು ಮೈಸೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ಕಳುಹಿಸಲಾಯಿತು.
ಶಿಬಿರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಉದಯಕುಮಾರ್, ನೇತ್ರ ತಜ್ಞ ಡಾ. ಲತಾ ಹಾಗೂ ನೇತ್ರ ಸಹಾಯಕ ನಾಗರಾಜ್ ಭಾಗವಹಿಸಿದ್ದರು.