ಬಣ್ಣಾರಿ ಉಪ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ
ಕ.ಪ್ರ.ವಾರ್ತೆ ಸುತ್ತೂರು ಜು. 15
ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿರುವ ಬಣ್ಣಾರಿ ಕಾರ್ಖಾನೆಯ ಉಪ ಕಚೇರಿಗೆ ಕಬ್ಬು ಬೆಳೆಗಾರರು ಬೀಗ ಹಾಕಿ ಪ್ರತಿಭಟಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗರಾರಿಗೆ ಕಳೆದು ಮೂರು ವರ್ಷದ ಬಾಕಿ ಹಣವನ್ನು ವಸೂಲಿ ಮಾಡುವತನಕ ಧರಣಿ ಮುಂದುವರಿಸುತ್ತೇವೆ ಎಂದು ರೈತರು ತಿಳಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಗುರುಲಿಂಗೇಗೌಡ, ಸಿದ್ದಪ್ಪ, ಮಹೇಶ, ಬುಂಡಪ್ಪ, ಮಹದೇವು, ಸಿದ್ದೇಗೌಡ, ಆರಾಧ್ಯ, ಶಿವಣ್ಣ, ಮಾದಪ್ಪ, ನಂಜುಂಡ, ಮಹದೇವಸ್ವಾಮಿ, ನಂದೀಶ ಇದ್ದರು.