ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೆಚ್ಚುವರಿ ವಿಭಾಗಕ್ಕೆ ಅನುಮತಿ

Rashmi Kasaragodu
Updated On : 17 Jul 2013, 12:12 pm

ಕೆ.ಆರ್. ನಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಬಿ.ಕಾಂ ಪದವಿ ಹೆಚ್ಚುವರಿ ವಿಭಾಗ ತೆರೆಯಲು ಮೈಸೂರು ವಿವಿ ಅನುಮತಿ ನೀಡಿದೆ. ಈವರೆಗೆ ಇಲ್ಲಿ 150 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಹೆಚ್ಚುವರಿಯಾಗಿ ಪ್ರಥಮ ವರ್ಷದ ಬಿಕಾಂ ಪದವಿಗೆ ದಾಖಲಾತಿ ಬಯಸಿ ಈ ಸಾರಿ 280 ಮಂದಿ ಅರ್ಜಿ ಸಲ್ಲಿಸಿದ್ದರಿಂದ ದಾಖಲಾತಿಗೆ ತೊಂದರೆಯಾಗಿತ್ತು.
ವಿದ್ಯಾರ್ಥಿಗಳ ಸಮಸ್ಯೆ ಅರಿತ ಶಾಸಕ ಸಾ.ರಾ.ಮಹೇಶ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರನ್ನು ಭೇಟಿ ಮಾಡಿ, ಹೆಚ್ಚುವರಿ ತರಗತಿ ಆರಂಭಿಸುವಂತೆ ಕೋರಿದ ಹಿನ್ನೆಲೆ ಮತ್ತೆ 90 ಮಂದಿಗೆ ದಾಖಲಾತಿಯ ಅವಕಾಶ ನೀಡಿ ಹೆಚ್ಚುವರಿ ತರಗತಿ ಮಂಜೂರು ಮಾಡಲಾಗಿದೆ. ಸೋಮವಾರದಿಂದ ಪ್ರಥಮ ಬಿಕಾಂಗೆ ಪ್ರವೇಶ ಆರಂಭಿಸಲಾಗಿದೆ ಎಂದು ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement