20ಕ್ಕೆ ನಿನದೇ ನೆನಪು ಗಾಯನ
ಕ.ಪ್ರ. ವಾರ್ತೆ ಮೈಸೂರು ಜು. 17
ಗಾಯಕ ರಾಘವೇಂದ್ರ ರತ್ನಾಕರ್ ಅವರು ಹಿನ್ನೆಲೆ ಗಾಯಕ ಡಾ. ಪಿ.ಬಿ. ಶ್ರೀನಿವಾಸ್ ಅವರ ಹೆಸರಿನಲ್ಲಿ ನಿನದೆ ನೆನಪು ಕಾರ್ಯಕ್ರಮವನ್ನು ಜು. 20ರ ಸಂಜೆ 5.30ಕ್ಕೆ ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿದ್ದಾರೆ.
ಹಳೆ ಚಲನಚಿತ್ರ ಗೀತೆಗಳ ಈ ಗಾಯನ ಕಾರ್ಯಕ್ರಮದಲ್ಲಿ ಯೋಗಾನರಸಿಂಹಸ್ವಾವು ದೇವಸ್ಥಾನದ ಸಂಸ್ಥಾಪಕ ಪ್ರೊ. ಭಾಷ್ಯಂ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಎಂ.ಕೆ. ಸೋಮಶೇಖರ್, ಪಾಲಿಕೆ ಸದಸ್ಯ ಬಿ.ಎಲ್. ಭೈರಪ್ಪ, ಡಾ. ಗೀತಾ ಮಹದೇವಪ್ರಸಾದ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೆ. ರಘುರಾಂ, ಕಾಂಗ್ರೆಸ್ ಮುಖಂಡ ಕೆ.ಆರ್. ಮೋಹನ್ಕುಮಾರ್, ಬಿಜೆಪಿ ಮುಖಂಡ ಯಶಸ್ವಿನಿ ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ರಂಗಕರ್ಮಿ ಶ್ರೀಕಂಠ ಗುಂಡಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ರಾಘವೇಂದ್ರ ರತ್ನಾಕರ್, ಡಾ. ಪ್ರೀತಮ್ ರಾಘವೇಂದ್ರ, ಬೇಬಿ ಶ್ರೇಷ್ಠ, ನಾರಾಯಣ್ ಹೆಡತಲೆ, ವೀಣಾ ಪಂಡಿತ್, ಅರುಣಾಚಲ ಪ್ರಸಾದ್, ಸಾಂಬಮೂರ್ತಿ ಅವರು ಹಾಡಲಿದ್ದಾರೆ. ವಿಶ್ವನಾಥ್ ಶಾಸ್ತ್ರಿ ಮತ್ತು ಮಂಜುನಾಥ್ ಸಹಕಾರ ನೀಡಲಿದ್ದು, ಕೆ.ಪಿ. ಮಧುಸೂದನ್ ಹಾಗೂ ಅರುಣಾಚಲ ಪ್ರಸಾದ್ ನಿರೂಪಿಸುವುದಾಗಿ ಹೇಳಿದರು.
ರಾಘವೇಂದ್ರ ರತ್ನಾಕರ್, ಡಾ. ಪ್ರೀತಮ್ ರಾಘವೇಂದ್ರ ಇದ್ದರು.