ಎಂಡಿಎ ನೋಟಿಸ್ ರದ್ದುಗೊಳಿಸಿದ ಹೈಕೋರ್ಟ್
ಮೈಸೂರು: ರಾಮಕೃಷ್ಣ ನಗರದಲ್ಲಿ ಆರೋಗ್ಯ ಯೋಗ ಸಂಸ್ಥೆ ನಿರ್ಮಿಸುತ್ತಿರುವ 400 ಹಾಸಿಗೆಯ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಂಡಿಎ ಆಯುಕ್ತರು ನೀಡಿದ್ದ ನೋಟಿಸ್ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯ, ಯಾವುದೆ ತನಿಖೆ ನಡೆಸದಂತೆಯೂ ಆದೇಶಿಸಿತ್ತು. ಆದರೂ ನೋಟಿಸ್ ನೀಡಿದ್ದರಿಂದ ಎಂಡಿಎ ಆಯುಕ್ತರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಎಂದು ಸಂಸ್ಥೆಯ ಡಾ. ಎಸ್.ಪಿ. ಯೋಗಣ್ಣ ತಿಳಿಸಿದ್ದಾರೆ. ಈ ಹಿಂದೆ ರಾಜಕೀಯ ಒತ್ತಡಕ್ಕೆ ಮಣಿದು ಪ್ರಾಧಿಕಾರವು ನಿವೇಶನ ರದ್ದುಗೊಳಿಸಿ ಸುಮಾರು 10 ವರ್ಷಗಳ ಕಾಲ ಆಸ್ಪತ್ರೆ ನಿರ್ಮಾಣ ತಡೆ ಹಿಡಿದ ಪರಿಣಾಮ ಸಂಸ್ಥೆಗೆ ಪ್ರಾಧಿಕಾರದಿಂದ ಸುಮಾರು ಮೂರುವರೆ ಕೋಟಿ ರು. ನಷ್ಟವಾಗಿದೆ. ಈ ನಷ್ಟವನ್ನು ಪ್ರಾಧಿಕಾರದಿಂದಲೆ ಭರಿಸಲು ನ್ಯಾಯಾಲಯಕ್ಕೆ ಮತ್ತೆ ಅರ್ಜಿ ಸಲ್ಲಿಸಲಾಗಿದೆ. ಆಯುಕ್ತರ ಈ ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.