ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದಾರಾಶಾ ಟ್ರೋಫಿ: ಸುಸ್ಥಿತಿಯಲ್ಲಿ ಅಸ್ಸಾಂ, ಸಂಕಷ್ಟದಲ್ಲಿ ಬರೋಡ

Rashmi Kasaragodu
Updated On : 18 Jul 2013, 12:46 pm

ಕ.ಪ್ರ. ವಾರ್ತೆ, ಮೈಸೂರು, ಜು. 17
ನಗರದಲ್ಲಿ ನಡೆಯುತ್ತಿರುವ ದಾರಾಶಾ ಅಖಿಲ ಭಾರತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಧ್ಯಮ ಕ್ರಮಾಂಕದ ರಿಶವ್ ದಾಸ್ ಬಾರಿಸಿದ ಅಜೇಯ 89 ರನ್ಗಳ ನೆರವಿನೊಂದಿಗೆ ಅಸ್ಸಾಂ ಸಿಎ ತಂಡವು ಸುಸ್ಥಿತಿಯಲ್ಲಿದೆ.
ಇಲ್ಲಿನ ಎಸ್ಜೆಸಿಇ ಮೈದಾನದಲ್ಲಿ ಬುಧವಾರ ಆರಂಭವಾದ ದಾರಾಶಾ ಟ್ರೋಫಿಯ ಸಿ ಗುಂಪಿನ ಪಂದ್ಯದಲ್ಲಿ ಆಂಧ್ರ ಸಿಎ ವಿರುದ್ಧ ಅಸ್ಸಾಂ ತಂಡವು ಮೊದಲ ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸುಸ್ಥಿತಿಯಲ್ಲಿದೆ. ಅಸ್ಸಾಂ ತಂಡದ ಆರಂಭಿಕ ಬ್ಯಾಟ್ಸ್ಮನ್ ಪ್ರೀತಂ ಡೆಬಂತ್ ತಮ್ಮ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಆಗ ಎರಡನೆ ವಿಕೆಟ್ಗೆ ಪರ್ವೀಸ್ ಅಜೀಜ್(58) ಮತ್ತು ರಿಶವ್ ದಾಸ್ ಜೋಡಿಯು 137 ರನ್ ಕಲೆಹಾಕಿತು. ಈ ವೇಳೆ ಪರ್ವೀಸ್ ಔಟ್ ಆದರು.
ಭೋಜನ ವಿರಾಮದ ವೇಳೆಗೆ ಮೂರನೆ ವಿಕೆಟ್ಗೆ ಅವ್ಜಿತ್ ಸಿಂಘ ರಾಯ್ ಅವರು ತಂಡದ ಮೊತ್ತಕ್ಕೆ 45 ರನ್ ಸೇರಿಸಿದರು. ಬಳಿಕ ಮಳೆಯಿಂದಾಗಿ ಪಂದ್ಯ ನಿಲ್ಲಿಸಲಾಯಿತು.
ಗಂಗೋತ್ರಿ ಗ್ಲೇಡ್ಸ್ನಲ್ಲಿ ನಡೆದ ಮತ್ತೊಂದು ಪಂದ್ಯಾವಳಿಯಲ್ಲಿ ಕೆಎಸ್ಸಿಎ ಸೆಕ್ರೆಟರಿ ಇಲೆವೆನ್ ತಂಡವು ಬರೋಡ ಸಿಎ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಬರೋಡ ತಂಡ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement