ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯಕ್ಷಗಾನ ಪ್ರದರ್ಶನ

Rashmi Kasaragodu
Updated On : 18 Jul 2013, 12:42 pm

ಕರಾವಳಿ ಯಕ್ಷಗಾನ ಕೇಂದ್ರವು ಪೌರಾಣಿಕ ಪ್ರಸಂಗಗಳ ಪಾರಂಪರಿಕ ಯಕ್ಷಗಾನ ಬಯಲಾಟ ಪ್ರದರ್ಶನವನ್ನು ಜು. 21 ರಿಂದ ಆಗಸ್ಟ್ 22 ರವರೆಗೆ ನಗರದಲ್ಲಿ ಏರ್ಪಡಿಸಿದೆ. ಜು. 21 ರಂದು ಕಲಾಮಂದಿರದಲ್ಲಿ ತುಳುನಾಡ ಸಿರಿ, 22 ರಂದು ವಿವೇಕಾನಂದ ಸಭಾಂಗಣದಲ್ಲಿ ಪಂಚವಟಿ, 23 ರಂದು ಜಗನ್ಮೋಹನ ಅರಮನೆಯಲ್ಲಿ ಯಕ್ಷ ಪಂಚಮಿ ಪ್ರಸಂಗಗಳು ನಡೆಯಲಿದೆ. ಜು. 28 ರಂದು ವೀಣೆ ಶೇಷಣ್ಣ ಭವನದಲ್ಲಿ ರಾವಣೋದ್ಭವ, ಶೂರ್ಪನಖಾ ವಿವಾಹ, ರಾವಣ ದಿಗ್ವಿಜಯ, ರಾವಣ ವಧೆ, ಜು. 29ರಂದು ರಾಮಕೃಷ್ಣಾಶ್ರಮದಲ್ಲಿ ಚಕ್ರವ್ಯೂಹ, ಜು. 30ರಂದು ಭಾರತಿ ಕನ್ವೆನ್ಷನ್ ಹಾಲ್ನಲ್ಲಿ ಕಂಜಾಂಕ್ಷಿ ಕಲ್ಯಾಣ, ಜು. 31ರಂದು ಶ್ರೀಮದ್ ಸಾಯಿ ರಾಜರಾಜೇಶ್ವರಿ ಅಧ್ಯಾತ್ಮ ಕೇಂದ್ರದಲ್ಲಿ ವಾನರಾಭ್ಯುದಯ ಪ್ರಸಂಗ ನಡೆಯಲಿದೆ.
ವ್ಯಾಖ್ಯಾನ ಬಿಡುಗಡೆ
ಡಾ. ಕುಮಾರ ನಿಜಗುಣರ ಗೀತಗಾಯನ ಮತ್ತು ವ್ಯಾಖ್ಯಾನ ಕೃತಿ ಬಿಡುಗಡೆ ಕಾರ್ಯಕ್ರಮವು ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಜು. 21ರ ಸಂಜೆ 6ಕ್ಕೆ ನಡೆಯಲಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕವು ಹಂಸಧ್ವನಿ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಕುಮಾರ ನಿಜಗುಣ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಭಾರತೀಯ ಭಾಷಾ ಸಂಸ್ಥಾನ ಪ್ರಾಧ್ಯಾಪಕ ಡಾ. ಆರ್. ಸುಬ್ಬಕೃಷ್ಣ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್. ಮಲ್ಲಣ್ಣ ಮತ್ತು ವೃಂದದಿಂದ ಸಂಗೀತ ಮತ್ತು ಗಾಯನ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ವಾಖ್ಯಾನ ಮಾಡುವರು. ದತ್ತಿ ದಾನಿಗಳಾದ ಪಿ.ಎಸ್. ಚಂದ್ರಣ್ಣ, ರಾಜೀವಿ ಚಿಕ್ಕಪುಟ್ಟಯ್ಯ ಭಾಗವಹಿಸುವರು.
ಗುರು ಪೂರ್ಣಿಮಾ
ಮೈಸೂರು: ಬೋಗಾದಿ ಆಯಿಶ್ ಕಾಲೋನಿಯ ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾವು ಜು. 22ರಂದು ಸಂಜೆ 6ಕ್ಕೆ ಗುರುಪೂರ್ಣಿಮಾ ಏರ್ಪಡಿಸಿದೆ ಎಂದು ಗೌ. ಕಾರ್ಯದರ್ಶಿ ಎನ್. ರಾಮಕೃಷ್ಣ ಶರ್ಮ ತಿಳಿಸಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಮೈಸೂರು: ಲಾಡ್ಜ್ವೊಂದರಲ್ಲಿ ವ್ಯಕ್ತಿಯೊಬ್ಬ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇರ್ವಿನ್ ರಸ್ತೆಯಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಕನಕಪುರ ನಿವಾಸಿ ಪ್ರಸಾದ್ (35) ಆತ್ಮಹತ್ಯೆ ಮಾಡಿಕೊಂಡವರು. ಇವರು ಇರ್ವಿನ್ ರಸ್ತೆಯಲ್ಲಿರುವ ಕಾನಿಷ್ಕಾ ಲಾಡ್ಜ್ನಲ್ಲಿ ಕಳೆದು ಎರಡು ದಿನಗಳಿಂದ ತಂಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮಂಡಿ ಠಾಣೆ ಇನ್ಸ್ಪೆಕ್ಟರ್ ಟಿ.ಬಿ. ರಾಜಣ್ಣ, ಎಸ್ಐ ಶಬ್ಬೀರ್ ಹುಸೇನ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement