ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಐಟಿ ದಾಳಿ ಖಂಡಿಸಿ ರಸ್ತೆತಡೆ

Rashmi Kasaragodu
Updated On : 19 Jul 2013, 12:25 pm

ಮೈಸೂರು: ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಒಕ್ಕಲಿಗರ ಸಂಘದವರು ಪಡುವಾರಹಳ್ಳಿ ಜಂಕ್ಷನ್ನಲ್ಲಿ ಗುರುವಾರ ರಸ್ತೆತಡೆದು ಪ್ರತಿಭಟಿಸಿದರು. ಕೇಂದ್ರ ಸರ್ಕಾರ ಕುಮ್ಮಕ್ಕಿನಿಂದಲೇ ಐಟಿ ಅಧಿಕಾರಿಗಳ ಮಠದ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಮೇಣದ ಬತ್ತಿ ಮೆರವಣಿಗೆ ಸಹ ಹಮ್ಮಿಕೊಂಡಿದ್ದರು. ಮುಖಂಡರಾದ ಬಸವೇಗೌಡ, ಎಸ್.ಬಿ.ಎಂ. ಮಂಜು ನೇತೃತ್ವ ವಹಿಸಿದ್ದರು.
ಖಂಡನೆ- ಪ್ರತಿಭಟನೆ: ಆದಿಚುಂಚನಗಿರಿ ಮಠದ ಮೇಲೆ ಐಟಿ ಅಧಿಕಾರಿಗಳ ದಾಳಿ, ಪೆಟ್ರೋಲ್ ದರ ಹೆಚ್ಚಳ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಭಾವಚಿತ್ರ ತೆರವುಗೊಳಿಸಿರುವುದು ಹಾಗೂ ಜಿಲ್ಲಾಧಿಕಾರಿ ಡಾ. ರಾಮೇಗೌಡ ವರ್ಗಾವಣೆ ಖಂಡಿಸಿ ಜಯೇವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎಸ್ಬಿಎಂ ಮಂಜು ಸ್ನೇಹ ಬಳಗದವರು ಗಾಂಧಿ ಚೌಕದಲ್ಲಿ ಪ್ರತಿಭಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement