ಕ್ಯಾರಿ ಓವರ್ ಪದ್ಧತಿಯನ್ನುಮುಂದುವರಿಸಲು ಆಗ್ರಹ
ಮೈಸೂರು: ಡಿಪ್ಲೊಮಾ ತರಗತಿಗಳಲ್ಲಿ ಕ್ಯಾರಿ ಓವರ್ ಪದ್ಧತಿ ಮುಂದುವರಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯವರು ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಗುರುವಾರ ಪ್ರತಿಭಟಿಸಿದರು. ನಗರದ ರಾಮಸ್ವಾಮಿ ವೃತ್ತದಿಂದ ಮೆರವಣಿಗೆ ಹೊರಟು ಜೆಎಲ್ಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ತಮ್ಮ ಮನವಿ ಸಲ್ಲಿಸಿದರು. ಡಿಪ್ಲೊಮಾ ಕ್ಯಾರಿ ಓವರ್ ಪದ್ಧತಿ ರದ್ದುಗೊಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಈ ಪದ್ಧತಿಯನ್ನು ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು. ಜಯ ಕರ್ನಾಟಕ ಅಧ್ಯಕ್ಷ ಶಶಿಧರ್ಗೌಡ, ಮುಖಂಡರಾದ ರೆಹಾನ್, ಅಭಿ, ವಿವೇಕ್ ಇದ್ದರು.