ಬುದ್ಧಿಮಾಂದ್ಯರಿಗೆ ಉಚಿತ ಔಷಧ ವಿತರಣೆ
ಕ.ಪ್ರ.ವಾರ್ತೆ ನಂಜನಗೂಡು ಜು. 18
ಇಲ್ಲಿನ ಊಟಿ ರಸ್ತೆಯ ಸಿಂಧುವಳ್ಳಿಯ ಗ್ರಾಮದ ಸಮೀಪವಿರುವ ಕರುಣಾಲಯ ಟ್ರಸ್ಟ್ನಲ್ಲಿರುವ ಬುದ್ಧಿ ಮಾಂದ್ಯರಿಗೆ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಕೆ.ಜಿ. ರಾಮಚಂದ್ರು ಉಚಿತವಾಗಿ ಔಷಧ ವಿತರಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅವರು, ಗುರುವಾರ ಸಾವಿರಾರು ರು. ವೆಚ್ಚದ ಔಷಧಗಳನ್ನು ಟ್ರಸ್ಟ್ಗೆ ನೀಡಿ ಮಾತನಾಡಿ, ರೋಟರಿ ಎಂಬುದು ಸೇವಾ ಸಂಸ್ಥೆ. ಬಡವರ, ವೃದ್ಧರ, ಶೋಷಿತರ, ಬುದ್ಧಿಮಾಂದ್ಯರ ಅಂಗವಿಕಲರ ಸೇವೆ ಮಾಡಿದರೆ ಭಗವಂತ ಮೆಚ್ಚುತ್ತಾನೆ. ನಾವು ಗಳಿಸಿದ ಹಣದಲ್ಲಿ ಕಿಂಚಿತ್ತಾದರೂ ಸೇವೆ ಮಾಡಿದರೆ, ಆತ್ಮತೃಪ್ತಿ ಸಿಗುತ್ತದೆ ಎಂದು ಹೇಳಿದರು. ರೋಟರಿಯ ಮಾಜಿ ಜಿಲ್ಲಾ ಗೌವರ್ನರ್ ನಾಗೇಂದ್ರನ್ ಇದ್ದರು.